ಬೆಂಗಳೂರು,ಸೆಪ್ಟಂಬರ್,14,2026 (www.justkannada.in): ಮಸೀದಿಗಳ ಮುಂದೆ ಗಣೇಶ ಮೂರ್ತಿ ಮೆರವಣಿಗೆ ಹೋಗದಂತೆ ಪಟಾಕಿ ಸಿಡಿಸದಂತೆ ಯುವಕರಿಗೆ ಟಿ.ನರಸೀಪುರ ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು ಈ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಇನ್ಸ್ ಪೆಕ್ಟರ್ ಸ್ವಲ್ಪ ಖಾರವಾಗಿ ಹೇಳಿರಬುಹುದು. ಕಳೆದ ವರ್ಷ ಸಣ್ಣ ಗಲಾಟೆಯಾಗಿದ್ದ ಮಾಹಿತಿ ಇತ್ತು. ಹೀಗಾಗಿ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಿ. ಯಾವುದೇ ಆಚರಣೆ ಇನ್ನೊಬ್ಬರಿಗೆ ಆತಂಕ ಆಗಬಾರದು ಎಂದಿದ್ದಾರೆ.
ಗಣೇಶ ಹಬ್ಬದ ಮೆರವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರಿಗೆ ಟಿ.ನರಸೀಪುರ ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದ ವಿಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇನ್ಸ್ ಪೆಕ್ಟರ್ ಎಚ್ಚರಿಕೆ ವಿರುದ್ದ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು.
Key words: warning, T. Narsipura Inspector, Home Minister, Priyank Kharge, defends






