Wednesday, September 9, 2026

BDA Apartments

Home Front Page ಸತೀಶ್ ಜಾರಕಿಹೊಳಿ ಸಹೋದರರ ಮೇಲೆ  ಇಡಿ ದಾಳಿ ಯಾಕಾಗಿಲ್ಲ? ಬಿ.ಕೆ ಹರಿಪ್ರಸಾದ್ ಕಿಡಿ

ಸತೀಶ್ ಜಾರಕಿಹೊಳಿ ಸಹೋದರರ ಮೇಲೆ  ಇಡಿ ದಾಳಿ ಯಾಕಾಗಿಲ್ಲ? ಬಿ.ಕೆ ಹರಿಪ್ರಸಾದ್ ಕಿಡಿ

  ಬೆಂಗಳೂರು,ಸೆಪ್ಟಂಬರ್,9,2026 (www.justkannada.in): ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಯಾಗಿದೆ. ಆದರೆ ಅವರ ಸಹೋದರರ ಮನೆ ಮೇಲೆ ಇಡಿ ದಾಳಿ ಏಕಿಲ್ಲ? ಅವರೆಲ್ಲರೂ ಬಿಜೆಪಿಯವರು ಎಂದು ಕೇಂದ್ರ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಕುಟುಕಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ  ಇಡಿ ದಾಳಿ ವಿಚಾರ ಸಂಬಂಧ  ಮಾತನಾಡಿದ ಬಿ.ಕೆ ಹರಿಪ್ರಸಾದ್,   ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ನಡೆಸಿದರಲ್ಲಿ ಅಚ್ಚರಿ ಇಲ್ಲ. ಇದೆಲ್ಲವೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಂತ್ರ . ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು  ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಸತೀಶ್ ಜಾರಕಿಹೊಳಿ ಸಹೋದರರಾದ  ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಇವರೆಲ್ಲರ ಮನೆ ಮೇಲೆ ಯಾಕೆ ಇಡಿ ದಾಳಿಯಾಗಿಲ್ಲ? ಅವರೆಲ್ಲರೂ ಬಿಜೆಪಿಯವರು. ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲವೂ ಬಿಜೆಪಿ ನಾಯಕರ ಸೂಚನೆ ಮೇರೆಗೆ ನಡೆಯುತ್ತಿರುವ ದಾಳಿ ಎಂದು ಬಿ.ಕೆ ಹರಿಪ್ರಸಾದ್  ಗುಡುಗಿದರು.

Key words: ED raid, Sathish Jarkiholi, B.K. Hariprasad