Tuesday, September 8, 2026

BDA Apartments

Home Cinema ಪ್ರದೋಷ್ ಮಾಫಿಸಾಕ್ಷಿ: 59ನೇ CCH ಕೋರ್ಟ್ ಆದೇಶ ರದ್ದು: ಮರು ಆದೇಶಕ್ಕೆ ಹೈಕೋರ್ಟ್ ಸೂಚನೆ

ಪ್ರದೋಷ್ ಮಾಫಿಸಾಕ್ಷಿ: 59ನೇ CCH ಕೋರ್ಟ್ ಆದೇಶ ರದ್ದು: ಮರು ಆದೇಶಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು,ಸೆಪ್ಟಂಬರ್,8,2026 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಎ14 ಪ್ರದೋಷ್ ಮಾಫಿ ಸಾಕ್ಷಿ ಸಂಬಂಧ 59ನೇ ಸಿಸಿಎಚ್ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಎ14 ಪ್ರದೋಷ್ ಮಾಫಿ ಸಾಕ್ಷಿ ಪರಿಗಣಿಸಿ 59ನೇ ಸಿಸಿಎಚ್ ಕೋರ್ಟ್ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಆರೋಪಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನಟ ದರ್ಶನ್ ಅರ್ಜಿ ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು, 59ನೇ ಸಿಸಿಎಚ್ ಕೋರ್ಟ್ ಹೊರಡಿಸಿದ್ದ ಆದೇಶವನ್ನು ರದ್ದು ಪಡಿಸಿ ಮತ್ತೆ ಒಂದು ವಾರದೊಳಗೆ ಮರು ಆದೇಶ ಹೊರಡಿಸುವಂತೆ ಸೂಚನೆ ನೀಡಿದೆ.

ಹೊಸದಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ ಕೇವಲ ಹೊಸದಾಗಿ ಆದೇಶವನ್ನಷ್ಟೇ ಮಾಡಬೇಕು ಎಂದು ನ್ಯಾ.ಎಂ..ನಾಗಪ್ರಸನ್ನ ಅವರದ್ದ ಪೀಠ ಸ್ಪಷ್ಟನೆ ನೀಡಿದೆ.

Key words: Renukaswamy murder case, Pradosh, Apology, Witness, High Court