Saturday, September 5, 2026

BDA Apartments

Home Front Page ನಾಡ ದೊರೆಯಲ್ಲ, ಇನ್ಮುಂದೆ ನನ್ನನ್ನು ಪ್ರಜಾಸೇವಕ ಎಂದು ಕರೆಯಿರಿ- ಸಿಎಂ ಡಿಕೆ ಶಿವಕುಮಾರ್

ನಾಡ ದೊರೆಯಲ್ಲ, ಇನ್ಮುಂದೆ ನನ್ನನ್ನು ಪ್ರಜಾಸೇವಕ ಎಂದು ಕರೆಯಿರಿ- ಸಿಎಂ ಡಿಕೆ ಶಿವಕುಮಾರ್

ವಿಜಯನಗರ,ಸೆಪ್ಟಂಬರ್,5,2026 (www.justkannada.in): ನಮ್ಮನ್ನು ಪರಿಚಯ ಮಾಡಿಕೊಡಬೇಕಾದರೇ ನಾಡಿನ ದೊರೆ ಅಂತಾರೆ. ಅದರೆ ಇನ್ಮುಂದೆ ನಾಡ ದೊರೆ ಎಂದು ಕರೆಯಬೇಡಿ ನನ್ನನ್ನು ಪ್ರಜಾಸೇವಕ ಅಂತಾ ಕರೆಯರಿ ಎಂದು  ಸಿಎಂ ಡಿಕೆ ಶಿವಕುಮಾರ್ ನುಡಿದರು.

ಇಂದು ವಿಜಯನಗರ ಕೂಡ್ಲಿಗಿಯಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ  ಡಿಕೆ ಶಿವಕುಮಾರ್,  ಇಡೀ ರಾಜ್ಯಕ್ಕೆ ವಿಜಯ ಸಿಗಬೇಕು. ಅಧಿಕಾರ ಕೊಟ್ಟವರಿಗೆ ಜಯ ಸಿಗಬೇಕು. ಈ ಪವಿತ್ರ ಭೂಮಿಯನ್ನ ಪ್ರಜಾಸೇವೆ ಇಲಾಖೆ ಉದ್ಘಾಟನೆಗೆ ಆಯ್ಕೆ ಮಾಡಿದ್ದೇನೆ.   ಅಂಬೇಡ್ಕರ್ ಸಮಾನತೆ ಬಗ್ಗೆ ನಾವು ಪ್ರತಿ ಹೆಜ್ಜೆಯಲ್ಲೂ ಗಮನಿಸುತ್ತಿದ್ದೇವೆ.  ನಿಮ್ಮ ವಿಶ್ವಾಸ ಗೆದ್ದು ನಿಮ್ಮ ಸಮಸ್ಯೆಗಳಿಗೆ ಹೊಸ ದಿಕ್ಕು ತೋರಿಸುತ್ತಿದ್ದೇವೆ.  ರಾಜ್ಯದಲ್ಲಿ ಐದು ಗ್ಯಾರಂಟಿ ಕೊಟ್ಟಾಗ ನಮ್ಮನ್ನ ಟೀಕೆ ಮಾಡಿದರು.   ಇದು ಸಾಧ್ಯನಾ ಎಂದು ಪ್ರಶ್ನಿಸಿದರು. ಈಗ ನಾವು ಮಾಡಿ ತೋರಿಸಿದ್ದೇವೆ ಎಂದರು.

ಪ್ರಜಾಸೇವಾ ಕಾರ್ಯಕ್ರಮ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ   ಸರ್ಕಾರವೇ ಮನೆ ಬಾಗಿಲಿಗೆ ಹೋಗಲು ಈ ಕಾರ್ಯಕ್ರಮ. ಪ್ರತಿ ತಿಂಗಳಲ್ಲಿ 2 ದಿನ ಪ್ರಜಾಸೇವಾ ಕಾರ್ಯಕ್ರಮ ನಡೆಯಲಿದೆ ತಿಂಗಳ ಮೊದಲನೇ ಶನಿವಾರ 3ನೇ ಶನಿವಾರ ಕಾರ್ಯಕ್ರಮ ನಡೆಯಿದೆ. ಜನರ ಸೇವೆಯೇ ಜನಾರ್ಧನ ಸೇವೆ ಅಂತಾ ನಾವು ಭಾವಿಸಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ನಮಗೆ ಈ ಸ್ಥಾನ ಕೊಟ್ಟಿದ್ದೀರಿ.  136 ಸ್ಥಾನ ಕೊಟ್ಟು ರಾಜ್ಯದ ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ರಾಜ್ಯದ ಜನರ ಕಷ್ಟಗಳನ್ನು ಕೇಳಿ ಅವುಗಳನ್ನ ಬಗೆಹರಿಸಲು ಹಾಗೂ ಜನಪರ ಆಳ್ವಿಕೆ ನೀಡಬೇಕೆಂಧು. ಈ ಹೊಸ ಯೋಜನೆ ಮಾಡಿದ್ದೇವೆ ಎಂದರು.

ನಮ್ಮನ್ನು ಪರಿಚಯ ಮಾಡಿಕೊಡಬೇಕಾದರೇ ನಾಡಿನ ದೊರೆ ಅಂತಾರೆ ಅದರೆ ಇನ್ಮುಂದೆ ನಾಡ ದೊರೆ ಎಂದು ಕರೆಯಬೇಡಿ ನನ್ನನ್ನು ಪ್ರಜಾಸೇವಕ ಅಂತಾ ಕರೆಯರಿ. ನನ್ನನ್ನ ಪ್ರಜಾಸೇವಕ ಎಂದುಕೊಳ್ಳಿ ಎಲ್ಲರಿಗೂ ವಿಧಾನಸೌಧಕ್ಕೆ ಬರಲು ಆಗುವುದಿಲ್ಲ.  ಜಿಲ್ಲಾಧಿಕಾರಿ ಕಚೇರಿ ತಾಲ್ಲೂಕು ಕಚೇರಿಗೂ ಹೋಗಲಿಕ್ಕೆ ಆಗಲ್ಲ.  ಹೀಗಾಗಿ ಎಲ್ಲಾ ಇಲಾಖೆಗಳು ಜನರ ಮನೆ ಬಾಗಿಲಿಗೆ ಬರಲಿವೆ. ಜನರ ಸಮಸ್ಯೆಗಳನ್ನು ಕೇಳಿ  ಬಗೆಹರಿಸುವ ಕೆಲಸ ಮಾಡಲಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

Key words: Vijayanagar, CM DK Shivakumar, Public service