Saturday, September 5, 2026

BDA Apartments

Home Front Page ಸಾಲಮನ್ನಾಗೆ ಬಿಜೆಪಿ ತಾಕೀತು: ಮೊದಲು ಕೇಂದ್ರಕ್ಕೆ ಮನವಿ ಮಾಡಿ ಅನುದಾನ ಕೊಡಿಸಲಿ- ಸಚಿವ ಯತೀಂದ್ರ ಸಿದ್ದರಾಮಯ್ಯ

ಸಾಲಮನ್ನಾಗೆ ಬಿಜೆಪಿ ತಾಕೀತು: ಮೊದಲು ಕೇಂದ್ರಕ್ಕೆ ಮನವಿ ಮಾಡಿ ಅನುದಾನ ಕೊಡಿಸಲಿ- ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಸೆಪ್ಟಂಬರ್,5,2026 (www.justkannada.in): ರಾಜ್ಯದಲ್ಲಿ ಸಾಲಮನ್ನಾ ಮಾಡಿ ಎಂದು ತಾಕೀತು  ಮಾಡಿದ ಬಿಜೆಪಿಗೆ ತಿರುಗೇಟು ನೀಡಿರುವ ನಗರಾಭಿವೃದ್ದಿ ಇಲಾಖೆ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಮೊದಲು ಬಿಜೆಪಿ ನಾಯಕರು ಕೇಂದ್ರಕ್ಕೆ ಮನವಿ ಮಾಡಿ ಅನುದಾನ ಕೊಡಿಸಲಿ  ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ  ಯತೀಂದ್ರ ಸಿದ್ದರಾಮಯ್ಯ, ಸಾಲಮನ್ನಾ ವಿಚಾರವಾಗಿ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಕಳೆದ ಬಾರಿ ಕೇಂದ್ರ ಸರ್ಕಾರಕ್ಕೆ 36 ಸಾವಿರ ಕೋಟಿ ರೂ. ಕೇಳಿ ಮನವಿ ಮಾಡಿದ್ದವು. ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದವು. ಕೊನೆಗೆ ಕೋರ್ಟ್ ಮೊರೆ ಹೋದ ಮೇಲೆ 3500 ಸಾವಿರ ಕೋಟಿ ರೂ. ಕೊಟ್ಟರು.  ಮೊದಲು ಬಿಜೆಪಿ ನಾಯಕರು ಕೇಂದ್ರಕ್ಕೆ ಮನವಿ ಮಾಡಿ ಅನುದಾನ ಕೊಡಿಸಲಿ. ಸಿಎಂ ಈಗಾಗಲೇ ವಿಜಯೇಂದ್ರ, ಅಶೋಕ್ ಅವರನ್ನು ದೆಹಲಿಗೆ ನಮ್ಮ ಜೊತೆ ಬನ್ನಿ ಎಂದಿದ್ದಾರೆ. ಅವರು ಕೂಡ ನಮ್ಮ ಜೊತೆ ಬಂದು ನಮಗೆ ಬರಬೇಕಾದ ಪಾಲು ಕೊಡಿಸಲಿ ಎಂದು ಒತ್ತಾಯಿಸಿದರು.

ದಸರಾದಲ್ಲಿ ಕೆಲವು ಬದಲಾವಣೆ ತರುವ ಕುರಿತು ಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಸಿಎಂ ಕರೆದಿದ್ದ ಸಭೆಯಲ್ಲಿ ನಾನು ಕೂಡ ಇದ್ದೆ. ಒಂದಷ್ಟು ಸಲಹೆ ಸೂಚನೆ ಕೊಟ್ಟಿದ್ದಾರೆ. ಈ ಬಾರಿ ಸೇನಾ ಟ್ಯಾಬ್ಲೋ ಸಹ ಇರುತ್ತದೆ. ಸಾಧ್ಯವಾದರೆ ಸೇನಾ ಶಸ್ತ್ರಾಸ್ತ್ರ ಪರೇಡ್ ಮಾಡಿಸಲು ಚಿಂತನೆ ನಡೆಸಿದ್ದೇವೆ. ಏರ್ ಶೋ ಮಾಡಿಸಲು ಚರ್ಚೆ ನಡೆಸಲಾಗಿದೆ. ಸಾಧ್ಯವಾಗುವ ಎಲ್ಲ ಬದಲಾವಣೆಯನ್ನು ಹೊಸತನವನ್ನು ದಸರಾಗೆ ತರಲಾಗುತ್ತದೆ ಎಂದು ತಿಳಿಸಿದರು.

Key words: BJP, loan waiver, Minister, Yathindra Siddaramaiah