ಬೆಂಗಳೂರು,ಸೆಪ್ಟಂಬರ್,4,2026 (www.justkannada.in): ಸಿಎಂ ಡಿಕೆ ಶಿವಕುಮಾರ್ ಗಿಂತ ಸೂಪರ್ ಸಿಎಂ ಇದ್ದಾರೆ ಅವರೇ ಸಚಿವ ಪ್ರಿಯಾಂಕ್ ಖರ್ಗೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು.
ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ಬಿಲ್ ವಾಪಸ್ ವಿಚಾರ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಾರ್ವಜನಿಕರು ಸಾಹಿತಿಗಳು ಪರಿಸರ ಪ್ರೇಮಿಗಳ ವಿರೋಧ ಹಿನ್ನೆಲೆಯಲ್ಲಿ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಉದ್ಯಾನವನ ಸಂರಕ್ಷಣೆ ಬಿಲ್ ಅನ್ನು ವಾಪಸ್ ಪಡೆದಿದ್ದಾರೆ. ಸಂಪುಟದಲ್ಲಿ ಬೆಂಗಳೂರಿನ ಜನರಿಗೆ ಮೋಸ ಮಾಡೋ ರೀತಿ ಹೇಳಿಕೆ ಕೊಡುತ್ತಿದ್ದೀರಿ. ಸಿಎಂ ಗಿಂತ ಸೂಪರ್ ಸಿಎಂ ಇದ್ದಾರೆ ಅವರೇ ಪ್ರಿಯಾಂಕ್ ಖರ್ಗೆ ಎಂದು ವ್ಯಂಗ್ಯವಾಡಿದರು.
ಪ್ರಿಯಾಂಕ್ ಖರ್ಗೆ ಈ ಬಿಲ್ ಅನ್ನು ಮತ್ತೆ ವಾಪಸ್ ತರುತ್ತೇವೆ ಎಂದಿದ್ದಾರೆ ಈ ಹೇಳಿಕೆ ಮೂಲಕ ಜನರ ಕಣ್ಣಿಗೆ ಮಂಕುಬೂದಿ ಎರಚುವ ತಂತ್ರ ಮಾಡಿದ್ದಾರೆ. ಈ ಬಿಲ್ ಬಗ್ಗೆ ಯಾವುದೇ ಕಾರಣಕ್ಕೂ ಸದನದಲ್ಲಿ ಚರ್ಚೆ ಆಗಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
Key words: Priyank Kharge, super CM, Union Minister, Shobha Karandlaje







