ಮೈಸೂರು,ಆಗಸ್ಟ್,27,2026 (www.justkannada.in): ಲಿಂಗಾಂಬುಧಿ ಕೆರೆ ನಿರ್ವಹಣೆಯ ಹೆಸರಿನಲ್ಲಿ ಅರಣ್ಯ ಇಲಾಖೆ ವಿಧಿಸಲು ಮುಂದಾಗಿರುವ ಪ್ರವೇಶ ಶುಲ್ಕವನ್ನು ಕೈಬಿಡುವಂತೆ ಒತ್ತಾಯಿಸಿ ವಾಯುವಿಹಾರಿಗಳು ಸಹಿ ಸಂಗ್ರಹಿಸಿದ ಮನವಿ ಪತ್ರವನ್ನು ಸಹಾಯಕ ವಲಯ ಅರಣ್ಯಾಧಿಕಾರಿ ಪ್ರಮೋದ್ ಅವರಿಗೆ ಸಲ್ಲಿಸಿದರು.
ಲಿಂಗಾಂಬುಧಿ ಮಿತ್ರರ ಬಳಗದ ಅಧ್ಯಕ್ಷ ನಾಗೇಶ್ ಸೇರಿದಂತೆ ಮುಖಂಡರು ಹಾಗೂ ವಾಯುವಿಹಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜನರ ವಿರೋಧದ ಹಿನ್ನೆಲೆಯಲ್ಲಿ ಪ್ರವೇಶ ಶುಲ್ಕ ಹಿಂಪಡೆಯುವ ಕುರಿತು ವಲಯ ಅರಣ್ಯಾಧಿಕಾರಿಯೊಂದಿಗೆ ಚರ್ಚಿಸಿ ಮಾಹಿತಿ ನೀಡುವುದಾಗಿ ಪ್ರಮೋದ್ ಭರವಸೆ ನೀಡಿದರು.
ಆದರೆ, ಪ್ರವೇಶ ಶುಲ್ಕದ ಆದೇಶವನ್ನು ತೆರವುಗೊಳಿಸಿ, ಲಿಖಿತವಾಗಿ ಶುಲ್ಕ ಹಿಂಪಡೆಯುವ ಆದೇಶ ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಇದೇ ವಿಚಾರವಾಗಿ ಆಗಸ್ಟ್ 30ರ ಭಾನುವಾರ ಲಿಂಗಾಂಬುಧಿ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಹಾಗೂ ವಾಯುವಿಹಾರಿಗಳು ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ENGLISH SUMMARY…
Protest Against Lingambudhi Park Entry Fee
Mysuru: Morning walkers submitted a petition to the Forest Department opposing the proposed entry fee at Lingambudhi Park.
Officials assured them that the demand to withdraw the fee would be discussed with higher authorities. However, protesters warned that their agitation would continue until a written order withdrawing the fee is issued.
A mass protest is planned on August 30 at Lingambudhi Park, with citizens and morning walkers urged to participate in large numbers.
Key words: Protest, Against ,Lingambudhi Park, Entry Fee






