Tuesday, August 25, 2026

BDA Apartments

Home Cinema ನಟ ದರ್ಶನ್ ಗೆ ಶಾಕ್ :  ಎ14 ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್

ನಟ ದರ್ಶನ್ ಗೆ ಶಾಕ್ :  ಎ14 ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್

ಬೆಂಗಳೂರು,ಆಗಸ್ಟ್,25,2026 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಎ14 ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯನ್ನು 59ನೇ ಸಿಸಿಹೆಚ್ ಕೋರ್ಟ್ ಪುರಸ್ಕರಿಸಿದೆ.

ಪ್ರಕರಣದ 14ನೇ ಆರೋಪಿ ಪ್ರದೋಷ್ ತನ್ನನ್ನ ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ಕೋರ್ಟ್  ಮಾಫಿಸಾಕ್ಷಿಯನ್ನ ಪರಿಗಣಿಸಿದೆ.

ತಮ್ಮ ಗಮನದಲ್ಲಿರುವ ಸತ್ಯವಾದ ಅಂಶಗಳನ್ನ ಬಹಿರಂಗಪಡಿಸಬೇಕು. ಸತ್ಯ ಮುಚ್ಚಿಟ್ಟರೇ ಮಾಫಿ ಸಾಕ್ಷಿಯಿಂದ ಆರೋಪಿಯನ್ನಾಗಿಸಲಾಗುವುದು ಎಂದು ನ್ಯಾಯಾಲಯ ಆರೋಪಿ ಪ್ರದೋಷ್ ಗೆ ಎಚ್ಚರಿಕೆ ನೀಡಿದೆ.   ಆದೇಶ ಪ್ರತಿಯನ್ನು ಜೈಲು ಅಧಿಕಾರಿಗಳ ಮೂಲಕ ಪ್ರದೋಷ್ ಗೆ ರವಾನೆ ಮಾಡಲಾಗುತ್ತಿದೆ ಎನ್ನಲಾಗಿದೆ.

Key words: Renukaswamy murder case, actor Darshan,  Court, mercy plea