ಬೀದರ್,ಆಗಸ್ಟ್,22,2026 (www.justkannada.in): ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆಗೆ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ಇದು ಪ್ರಧಾನಿ ಮೋದಿ, ಅಮಿತ್ ಶಾರನ್ನು ರಕ್ಷಣೆ ಮಾಡುವ ಉದ್ದೇಶವೇ ಹೊರತ್ತು ಬೇರೆ ಅಲ್ಲ ಎಂದಿದ್ದಾರೆ. 
ಈ ಕುರಿತು ಮಾತನಾಡಿದ ಬಿ.ಕೆ ಹರಿಪ್ರಸಾದ್, ದೆಹಲಿಯಲ್ಲಿ ಎಲ್ಲ ಸಂಸದರ ಜತೆ ಸಿಎಂ ಡಿಕೆ ಶಿವಕುಮಾರ್ ಸಭೆ ಮಾಡಿದ್ದರು. ಕೇಂದ್ರದಿಂದ 10 ಸಾವಿರ ಕೋಟಿ ಪರಿಹಾರ ಕೊಡಿಸಿ ಎಂದಿದ್ದರು. ಬರ ಅಧ್ಯಯನ ತಂಡ ಕಳುಹಿಸಬೇಕು ಎಂದು ಮನವಿ ಮಾಡಿದ್ದರು. ಸದನದಲ್ಲಿ ಇದು ಚರ್ಚೆಗೆ ಬರುತ್ತದೆಂದು ನಾಗೇಂದ್ರ ವಿಚಾರವಾಗಿ ಧರಣಿ ಮಾಡುತ್ತಿದ್ದಾರೆ. ಮೋದಿ, ಅಮಿತ್ ಶಾ ರಕ್ಷಣೆ ಮಾಢುವ ಉದ್ದೇಶವೇ ಹೊರತು ಬೇರೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯ ಹೋರಾಟದ ವಿರುದ್ದ ಹೋರಾಟ ಮಾಡಿದ್ದು ಆರ್ ಎಸ್ಎಸ್. ಸ್ವಾತಂತ್ರ ಹೋರಾಟದಲ್ಲಿ ಆರ್ ಎಸ್ ಎಸ್ ಪಾಲ್ಗೊಂಡಿರಲಿಲ್ಲ. ಅವರನ್ನು ತಲೆ ಮೇಲೆ ಇಟ್ಟುಕೊಂಡು ಸುತ್ತೋಕೆ ಆಗುತ್ತಾ? ಸಂವಿಧಾನದ ವಿರೋಧಿಗಳು ರಾಷ್ಟ್ರಗೀತೆಯ ವಿರೋಧಿಗಳು ತ್ರಿವರ್ಣಧ್ವಜದ ವಿರೋಧಿಗಳನ್ನು ಪೂಜೆ ಮಾಡೋಕೆ ಆಗುತ್ತಾ? ಎಂದು ಕಿಡಿಕಾರಿದರು.
Key words: BJP, B. Nagendra, resignation, BK Hariprasad







