Thursday, August 20, 2026

BDA Apartments

Home Front Page 2019ರಿಂದಲೇ ಸರ್ಕಾರದ ಎಚ್ಚರಿಕೆ.. ಈಗ ಮತ್ತೆ ಬದಲಿ ನಿವೇಶನ ರದ್ದಿಗೆ ಆದೇಶ..!

2019ರಿಂದಲೇ ಸರ್ಕಾರದ ಎಚ್ಚರಿಕೆ.. ಈಗ ಮತ್ತೆ ಬದಲಿ ನಿವೇಶನ ರದ್ದಿಗೆ ಆದೇಶ..!

ಮೈಸೂರು,ಆಗಸ್ಟ್,20,2026 (www.justkannada.in): ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಹಂಚಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ನಿಯಮಬಾಹಿರವಾಗಿ ಬದಲಿ ನಿವೇಶನ ಹಂಚಿಕೆ ಮಾಡದಂತೆ 2019ರಿಂದಲೇ ಸರ್ಕಾರದ ಮಟ್ಟದಲ್ಲಿ ಸೂಚನೆಗಳು ಮತ್ತು ಆಕ್ಷೇಪಗಳು ವ್ಯಕ್ತವಾಗಿದ್ದವು. 2023ರಲ್ಲೂ ನಗರಾಭಿವೃದ್ಧಿ ಇಲಾಖೆ, MDA ಸಭೆಗಳಲ್ಲಿ ನಿಯಮ 16ಕ್ಕೆ ವಿರುದ್ಧವಾಗಿ ಹಲವು ಬದಲಿ ನಿವೇಶನಗಳಿಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ದಾಖಲಿಸಿತ್ತು.

ಆದರೂ ಪ್ರಶ್ನೆ ಈಗ ಒಂದೇ..

ಸರ್ಕಾರದ ಆದೇಶಗಳು ಅಷ್ಟಕ್ಕೂ ಎಷ್ಟರ ಮಟ್ಟಿಗೆ ಕಾರ್ಯಗತವಾದವು?

ನಿಯಮಬಾಹಿರವಾಗಿ ಹಂಚಿಕೆಯಾಗಿದ್ದ ನಿವೇಶನಗಳನ್ನು ಅಂದೇ ಗುರುತಿಸಿ ರದ್ದುಪಡಿಸಲಾಗಿತ್ತೇ?

ಈ ಆದೇಶಗಳ ನಡುವೆಯೂ ಬದಲಿ ನಿವೇಶನ ಹಂಚಿಕೆ ಮುಂದುವರಿದಿತ್ತೇ?

ಈಗಾಗಲೇ ಹಂಚಿಕೆ, ನೋಂದಣಿ ಮತ್ತು ಖಾತೆ ಮಾಡಿಸಿಕೊಂಡಿರುವ ನಿವೇಶನಗಳ ಸ್ಥಿತಿ ಏನು?

ಇದೀಗ ಸರ್ಕಾರ ಮತ್ತೆ ಕಠಿಣ ಕ್ರಮಕ್ಕೆ ಮುಂದಾಗಿದೆ. ನಿಯಮಬಾಹಿರವಾಗಿ ಹಂಚಿಕೆಯಾದ ನಿವೇಶನಗಳನ್ನು ರದ್ದುಪಡಿಸುವುದರ ಜೊತೆಗೆ, ನೋಂದಣಿಯಾಗಿರುವ ನಿವೇಶನಗಳ ಕ್ರಯಪತ್ರ ರದ್ದತಿಗೂ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಹೀಗಾಗಿ ಇದು ಕೇವಲ ಹೊಸ ಆದೇಶದ ಪ್ರಶ್ನೆಯಲ್ಲ… 2019ರಿಂದ ಬಂದಿರುವ ಸರ್ಕಾರಿ ಸೂಚನೆಗಳು ಎಷ್ಟು ಜಾರಿಯಾಗಿವೆ ಎಂಬುದರ ಸಂಪೂರ್ಣ ಪರಿಶೀಲನೆಯ ಅಗತ್ಯವೂ ಎದುರಾಗಿದೆ.

*“ಆದೇಶ ಬಂದಿತ್ತು… ಆದರೆ ಜಾರಿಯಾಗಿತ್ತೇ?” — ಇದೇ ಈಗ ಪ್ರಮುಖ ಪ್ರಶ್ನೆ.*

Key words: MDA, Government, again, order, cancel, alternative site