ನವ ದೆಹಲಿ, ಆ.೧೯, ೨೦೨೬: 27 ವರ್ಷಗಳ ಹಿಂದೆ ಒಡಿಶಾದ ಮನೋಹರ್ಪುರದಲ್ಲಿ ನಡೆದ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳ ಸಜೀವ ದಹನ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಇಂದು (ಆಗಸ್ಟ್ 19) ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ ಈಗ ಪ್ರಕರಣದ ಪ್ರಮುಖ ಘಟ್ಟವಾಗಿದೆ.
1999ರ ಜನವರಿ 22ರ ರಾತ್ರಿ…
ವಾಹನದೊಳಗೆ ಮಲಗಿದ್ದ 10 ವರ್ಷದ ಫಿಲಿಪ್, 6 ವರ್ಷದ ತಿಮೋತಿ ಮತ್ತು ಅವರ ತಂದೆ ಗ್ರಹಾಂ ಸ್ಟೇನ್ಸ್ ಅವರನ್ನು ದಾರಾ ಸಿಂಗ್ ನೇತೃತ್ವದ ಗುಂಪು ವಾಹನ ಸಮೇತ ಬೆಂಕಿಗೆ ಆಹುತಿ ನೀಡಿತ್ತು.

ಈ ಭೀಕರ ಹತ್ಯೆ ಪ್ರಕರಣದಲ್ಲಿ ದಾರಾ ಸಿಂಗ್‌ಗೆ ಮೊದಲು ಮರಣದಂಡನೆ ವಿಧಿಸಲಾಗಿತ್ತು. ಆದರೆ 2003ರಲ್ಲಿ ಒರಿಸ್ಸಾ ಹೈಕೋರ್ಟ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು. 2011ರಲ್ಲಿ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು.

ಈಗ ಪ್ರಶ್ನೆ ಒಂದೇ…
25 ವರ್ಷಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿರುವ ದಾರಾ ಸಿಂಗ್‌ಗೆ ಶಿಕ್ಷಾ ವಿನಾಯಿತಿ ನೀಡಿ ಬಿಡುಗಡೆ ಮಾಡಬಹುದೇ?
ದಾರಾ ಸಿಂಗ್ ಈಗಾಗಲೇ ಶಿಕ್ಷೆ ಕಡಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪಶ್ಚಾತ್ತಾಪ ವ್ಯಕ್ತಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಮತ್ತೊಂದೆಡೆ, ಸಿಪಿಐ ಮತ್ತು ಸಿಪಿಎಂ ಸೇರಿದಂತೆ ವಿರೋಧದ ಧ್ವನಿಗಳು ತೀವ್ರವಾಗಿವೆ.
ಇದು ಕೇವಲ ಒಬ್ಬ ಕೈದಿಯ ಬಿಡುಗಡೆ ವಿಚಾರವಲ್ಲ…
ಕೋಮು ದ್ವೇಷದ ಹಿನ್ನೆಲೆಯಲ್ಲಿನ ಅತ್ಯಂತ ಭೀಕರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗೆ ಕ್ಷಮಾದಾನ ನೀಡುವುದು ಸರಿಯೇ? ಇದರಿಂದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ನಂಬಿಕೆಗೆ ಧಕ್ಕೆಯಾಗುತ್ತದೆಯೇ? ಅಥವಾ 25 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವುದನ್ನು ಪರಿಗಣಿಸಿ ಕಾನೂನುಬದ್ಧವಾಗಿ ಶಿಕ್ಷಾ ವಿನಾಯಿತಿ ನೀಡಬೇಕೇ? ಇದೇ ಕಾರಣಕ್ಕೆ ಇಂದಿನ ಸುಪ್ರೀಂ ಕೋರ್ಟ್ ವಿಚಾರಣೆ ಮಹತ್ವ ಪಡೆದುಕೊಂಡಿದೆ.
ಮತ್ತೊಂದು ಪ್ರಮುಖ ಸಂಗತಿ…

ಗ್ರಹಾಂ ಸ್ಟೇನ್ಸ್ ಅವರ ಪತ್ನಿ ಗ್ಲಾಡಿಸ್ ಸ್ಟೇನ್ಸ್ ಅವರು ಆರೋಪಿಗಳನ್ನು ಕ್ಷಮಿಸಿರುವುದಾಗಿ ಬಹಿರಂಗವಾಗಿ ಹೇಳಿದ್ದರು. ಆದರೆ ವೈಯಕ್ತಿಕ ಕ್ಷಮೆ ಮತ್ತು ಕಾನೂನುಬದ್ಧ ಶಿಕ್ಷಾ ವಿನಾಯಿತಿ—ಇವೆರಡೂ ಒಂದೇ ಪ್ರಶ್ನೆಯೇ? ಈ ದಿನ ಸುಪ್ರೀಂ ಕೋರ್ಟ್ ಯಾವ ನಿಲುವು ತೆಗೆದುಕೊಳ್ಳಲಿದೆ?
ದಾರಾ ಸಿಂಗ್‌ಗೆ ಬಿಡುಗಡೆ ಸಿಗುತ್ತಾ? ಅಥವಾ ಜೀವಾವಧಿ ಶಿಕ್ಷೆ ಮುಂದುವರಿಯುತ್ತಾ? 27 ವರ್ಷಗಳ ಹಿಂದಿನ ಆ ಬೆಂಕಿಯ ಪ್ರಕರಣ… ಈಗ ಮತ್ತೆ ನ್ಯಾಯಾಂಗದ ಮುಂದೆ!
ಆ.19ರ ವಿಚಾರಣೆಯತ್ತ ಇದೀಗ ದೇಶದ ಗಮನ.
Key words: Graham Staines, Murder Case, 27 Years Later, horrific communal violence cases, Australian missionary

SUMMARY:
Graham Staines Murder Case: 27 Years Later
The Graham Staines murder case remains one of India’s most horrific communal violence cases. On January 22, 1999, Australian missionary Graham Staines and his two sons, 10-year-old Philip and 6-year-old Timothy, were burned alive inside their station wagon at Manoharpur village in Odisha.
Staines had worked for decades among tribal and poor communities, particularly leprosy patients. The prosecution alleged that a mob led by Dara Singh attacked the vehicle over suspicions of religious conversion and communal tensions.
A CBI court sentenced Dara Singh to death in 2003, but the Orissa High Court later commuted it to life imprisonment. In 2011, the Supreme Court upheld the life sentence, saying the case did not meet the “rarest of rare” standard for capital punishment.

After spending more than 25 years in prison, Dara Singh has sought remission of his sentence. The Odisha government was asked to consider his plea, while CPI and CPM have opposed his release.
Meanwhile, Graham Staines’ wife Gladys Staines, who continued her humanitarian work in Odisha after the tragedy, publicly forgave the killers. She received the Padma Shri in 2005 for her social service.
The case remains a painful reminder of the dangers of communal hatred and violence.







