ಮೈಸೂರು,ಆಗಸ್ಟ್,18,2026 (www.justkannada.in): ಸುಮಾರು 400 ಕ್ಕೂ ಹೆಚ್ಚು ಮಂದಿಗೆ 700 ಕೆ.ಜಿ ಚಿನ್ನ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನತಂಬಿ ವಿರುದ್ಧ ಇನ್ನೂ ನಾಲ್ಕು ಪ್ರಕರಣ ದಾಖಲಾಗಿವೆ.
ನಜರ್ ಬಾದ್ ಹಾಗೂ ಕುವೆಂಪುನಗರ ಠಾಣೆಯಲ್ಲಿ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಮಹಿಳೆಯ ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ ಹಾಗೂ ಗೂಂಡಾಗಳಿಂದ ಕೂಡಿ ಹಾಕಿ ಹಲ್ಲೆ ಮಾಡಿರುವ ಆರೋಪ ಚಿನ್ನತಂಬಿ ವಿರುದ್ದ ಕೇಳಿ ಬಂದಿದೆ.
ಹಾಸನದ ಅರಕಲಗೂಡು ಮೂಲದ ಮಹಿಳೆ, ಹೊಳೆ ನರಸೀಪುರ ತಾಲೂಕಿನ ಮಹಿಳೆ ಸೇರಿ ಮೈಸೂರಿನ ಇಬ್ಬರಿಗೆ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಚಿನ್ನ ಅಡವಿಡಲು ಬಂದವರ ಬಳಿ ಅಸಭ್ಯವಾಗಿ ವರ್ತಿಸಿ ದೈಹಿಕ, ಮಾನಸಿಕ ಹಿಂಸೆ ನೀಡಿ ಕಿರುಕುಳ ಹಾಗೂ ಚಿನ್ನ ಕಸಿದುಕೊಂಡು ಹಣ ನೀಡದೆ ವಂಚನೆ ಮಾಡಿದ್ದಲ್ಲದೇ ರೌಡಿಗಳನ್ನ ಕರೆಸಿ ಹಲ್ಲೆ ನಡೆಸಿರುವ ಆರೋಪವೂ ಕೇಳಿ ಬಂದಿದೆ.
ಮಹಿಳೆಯರ ಜೊತೆ ತೆರಳಿದ್ದ ಮಹಿಳೆಯ ಗಂಡ ಹಾಗೂ ಅಣ್ಣಂದಿರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಪ್ರಕರಣ ಕುರಿತು ಚಿನ್ನ ಕಳೆದುಕೊಂಡವರು ನಿತ್ಯ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Key words: Mysore, Four more cases, registered, against, Chinnathambi






