Sunday, September 27, 2026

BDA Apartments

Home Front Page ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಆಗಸ್ಟ್,12,2026 (www.justkannada.in):  ದೇಶದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ರಾಮ್‌ ನಾಥ್ ಕೋವಿಂದ್ ಅವರ ಜೀವನಾಧಾರಿತ ಆತ್ಮಕಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು  ಬಿಡುಗಡೆ ಮಾಡಿದರು.

ರಮನಾಥ್ ಕೋವಿಂದ್ ಅವರು 2017 ರಿಂದ 2022 ರವರೆಗೆ ಭಾರತದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಾಮ್‌ನಾಥ್ ಕೋವಿಂದ್ ಅವರ ಆತ್ಮಕಥೆ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ,  ಕಾನ್‌ಪುರ ದೇಹತ್‌ ನ ಸಾಧಾರಣ ಕುಟುಂಬದಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಏರಿದ ರಾಮ್‌ನಾಥ್ ಕೋವಿಂದ್ ಅವರ ಜೀವನ ಯಾನವು ಭಾರತದ ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ.  ಕೋವಿಂದ್ ಜಿ ಅವರ ಜೀವನವನ್ನು ಒಮ್ಮೆ ಗಮನಿಸಿ. ಅವರು ಕಾನ್‌ಪುರ ದೇಹತ್‌ನ ತೀರಾ ಸಾಧಾರಣ ಕುಟುಂಬದಲ್ಲಿ ಜನಿಸಿದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು. ಇಂತಹ ಆಘಾತಕಾರಿ ಘಟನೆಯಿಂದ ಯಾರು ಬೇಕಾದರೂ ಕುಗ್ಗಿಹೋಗಬಹುದು. ಆದರೆ, ಕೋವಿಂದ್ ಅವರು ಈ ನೋವಿನಿಂದಲೇ ಇನ್ನಷ್ಟು ಬಲಶಾಲಿಯಾಗಿ ಬೆಳೆದರು ಎಂದು ನುಡಿದರು.

“ಭಾರತದಂತಹ ಬೃಹತ್ ದೇಶದ ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆಯಲ್ಲಿದ್ದರೂ, ಕೋವಿಂದ್ ಜಿ ಎಂದಿಗೂ ತಮ್ಮ ಮೂಲವನ್ನು ಮರೆಯಲಿಲ್ಲ, ಅತ್ಯಂತ ವಿನಮ್ರವಾಗಿ ಉಳಿದುಕೊಂಡರು ಎಂದು ಪ್ರಧಾನಿ ಮೋದಿ ಬಣ್ಣಿಸಿದರು.justkannada jk02_new jk02 new

Key words:  PM Modi, released , autobiography, former President, Ramnath Kovind