Thursday, August 13, 2026

BDA Apartments

Home Front Page ಸಿದ್ಧರಾಮಯ್ಯ ಸಿಎಂ ಆಗಬೇಕೆಂಬ ಬೇಡಿಕೆ ಈಡೇರದಕ್ಕೆ ರಾಜೀನಾಮೆ-ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ…

ಸಿದ್ಧರಾಮಯ್ಯ ಸಿಎಂ ಆಗಬೇಕೆಂಬ ಬೇಡಿಕೆ ಈಡೇರದಕ್ಕೆ ರಾಜೀನಾಮೆ-ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ…

ಬೆಳಗಾವಿ,ನ,3,2019(www.justkannada.in): ಸಿದ್ಧರಾಮಯ್ಯ ಸಿಎಂ ಆಗಬೇಕೆಂದು ಬೇಡಿಕೆ ಇಟ್ಟಿದ್ದವು. ಆದರೆ ಬೇಡಿಕೆ ಈಡೇರಲಿಲ್ಲ. ಹೀಗಾಗಿ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿದವು ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಚಿಕ್ಕೋಡಿಯಲ್ಲಿ ಇಂದು ಮಾತನಾಡಿದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ, ಬಿಜೆಪಿ ಸರ್ಕಾರ ಮಾಡಬೇಕು ಅಂತಾ ನಾವು ರಾಜೀನಾಮೆ ನೀಡಲಿಲ್ಲ. ಸಿದ್ಧರಾಮಯ್ಯ ಸಿಎಂ ಆಗಬೇಕು ಎಂದು ಬೇಡಿಕೆ ಇಟ್ಟಿದ್ದವು. ಆದರೆ ಬೇಡಿಕೆ ಈಡೇರಿಸಲಿಲ್ಲ. ನಮ್ಮನ್ನ ನಡುರೋಡಿನಲ್ಲಿ ಬಿಟ್ಟ ಕಾರಣ ರಾಜೀನಾಮೆ ನೀಡಿದ್ದೇವೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ನೀರಾವರಿ ಮಂತ್ರಿ  ಸರಿಯಾಗಿ ಸ್ಪಂದಿಸಲಿಲ್ಲ. ಎಂ.ಬಿ ಪಾಟೀಲ್ ನೀರಾವರಿ ಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಚುನಾವಣಾ ಫಲಿತಾಂಶದ ಬಳಿಕ ಎಲ್ಲವೂ ಬದಲಾಯಿತು ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

Key words:  demand – Siddaramaiah- CM- resigns- disqualified MLA-Ramesh jarakiholi,