ಬೆಳಗಾವಿ,ಆಗಸ್ಟ್,11,2026 (www.justkannada.in): ಸಚಿವ ಸ್ಥಾನದಿಂದ ಬಿ. ನಾಗೇಂದ್ರ ಅವರನ್ನು ತೆಗೆಯುವ ಪ್ರಶ್ನೆ ಉದ್ಭವಿಸಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಮಂತ್ರಿ ಮಾಡಿದ್ದಾರೆ ಅವರನ್ನ ತೆಗೆಯವ ಪ್ರಶ್ನೆ ಉದ್ಭವಿಸಲ್ಲ. ಎಸ್ ಐಟಿ ತನಿಖೆ ಮಾಡಿ ಈಗಾಗಲೇ ವರದಿ ಕೊಟ್ಟಿದೆ. ಇಡಿ, ಸಿಬಿಐ ಅದಿಖಾರಿಗಳು ಸಹ ತನಿಖೆ ಮುಂದುವರಿಸಿದ್ದಾರೆ. ಸರ್ಕಾರಕ್ಕೆ ಆ ಹಣ ವಾಪಸ್ ಬಂದಿದೆ. ನಿಯಮ ಉಲ್ಲಂಘನೆ ಮಾಡಿ ದೆಹಲಿಗೆ ಹೋಗಿದ್ದು ಗೊತ್ತಿಲ್ಲ. ಕೋರ್ಟ್ ಅವಕಾಶ ಕೊಟ್ಟಿದೆ ಅಂತಾ ನಾಗೇಂದ್ರ ಹೇಳಿದ್ದಾರೆ ಸದನದಲ್ಲಿ ಈ ಬಗ್ಗೆ ನೋಡೋಣ ಎಂದರು.
ನೂತನ ಸಚಿವರಿಗೆ ಖಾತೆ ಹಂಚಿಕೆ ವಿಳಂಬ ವಿಚಾರ, ಆಗಸ್ಟ್, 13 ರೊಳಗೆ ಖಾತೆ ಹಂಚಿಕೆ ಮಾಡುತ್ತೆ. ಸರ್ಕಾರ ಮಾಡಲೇ ಬೇಕು ಯಾರಿಗೆ ಯಾವ ಖಾತೆ ಅಂತಾ ಹೈಕಮಾಂಡ್ ನಿರ್ಧರಿಸುತ್ತೆ. ಗೊಂದಲವಿಲ್ಲ 2 ದಿನದಲ್ಲಿ ಸರಿ ಮಾಡುತ್ತಾರೆ. ಡೆಡ್ ಲೈನ್ ಇದೆ ಅಷ್ಟರಲ್ಲಿ ಖಾತೆ ಹಂಚಿಕೆ ಮಾಡುತ್ತಾರೆ. ಸೋಮವಾರದಿಂದ ಪ್ರಶ್ನೋತ್ತರ ಕಲಾಪ ಶುರು ಮಾಡೋದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
Key words: no question, B. Nagendra, ministerial post, Satish Jarkiholi







