Saturday, September 19, 2026

BDA Apartments

Home Front Page ಶಾಸಕರ ಬೆಂಬಲಿಗರು ಪ್ರತಿಭಟಿಸಿದ್ರೆ ಸಿದ್ದರಾಮಯ್ಯ ಏಕೆ ಮಾತನಾಡಬೇಕು: ಬಿವೈವಿಗೆ ಸಚಿವ ಯತೀಂದ್ರ ತಿರುಗೇಟು

ಶಾಸಕರ ಬೆಂಬಲಿಗರು ಪ್ರತಿಭಟಿಸಿದ್ರೆ ಸಿದ್ದರಾಮಯ್ಯ ಏಕೆ ಮಾತನಾಡಬೇಕು: ಬಿವೈವಿಗೆ ಸಚಿವ ಯತೀಂದ್ರ ತಿರುಗೇಟು

ಬೀದರ್,ಆಗಸ್ಟ್,5,2026 (www.justkannada.in): ಸಚವ ಸ್ಥಾನ ವಂಚಿತರ ಪ್ರತಿಭಟನೆಗೆ ಸಿದ್ದರಾಮಯ್ಯ ಕಾರಣ ಎಂಬ ಬಿಜೆಪಿ ರಾಜ್ಯಾಧ್ಯಕ್ಷ  ಬಿವೈ ವಿಜಯೇಂದ್ರರವರ  ಆರೋಪಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ,  ನಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎಂದು ಅವರಿಗೇನು ಗೊತ್ತಿದೆ. ನಮ್ಮ ಪಕ್ಷದ ಬೆಳವಣಿಗೆಗಳನ್ನು ನೋಡಿಕೊಂಡು ತಮ್ಮ ರಾಜಕೀಯ ಬೆಳವಣಿಗೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.  ಬಿವೈ ವಿಜಯೇಂದ್ರ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ವರಿಷ್ಠರು ಯಾರದ್ದೋ ಪಟ್ಟಿ ತೆಗೆದುಕೊಂಡು ಪ್ರಕಟ ಮಾಡಿಲ್ಲ. ಎಲ್ಲರ ಅಭಿಪ್ರಾಯವನ್ನು ಪಡೆದು ಸಚಿವರ ಹೆಸರು ಪ್ರಕಟಿಸಿದ್ದಾರೆ ಎಂದು ಟಾಂಗ್ ಕೊಟ್ಟರು.ಶಾಸಕರ ಬೆಂಬಲಿಗರು ಪ್ರತಿಭಟಿಸಿದ್ರೆ ಸಿದ್ದರಾಮಯ್ಯ ಏಕೆ ಮಾತನಾಡಬೇಕು by vijayendra

ಶಾಸಕರ ಬೆಂಬಲಿಗರು ಪ್ರತಿಭಟಿಸಿದ್ರೆ ಸಿದ್ದರಾಮಯ್ಯ ಏಕೆ ಮಾತನಾಡಬೇಕು. ಸಿದ್ದರಾಮಯ್ಯ ಮಿನಿಸ್ಟರ್ ಅಥವಾ ಏನು ಅಲ್ಲ. ಸಚಿವಾಕಾಂಕ್ಷಿಗಳೂ ನಮ್ಮ ತಂದೆಯವರಿಗೆ ಬೇಕಾದವರೇ ಆದರೂ ಸಿದ್ದರಾಮಯ್ಯ ಏಕೆ ಮಾತನಾಡಬೇಕು.   ಖಾಲಿ ಇರುವ ಒಂದು ಸ್ಥಾನಕ್ಕೆ ಮಹಿಳೆಯರನ್ನ ಆಯ್ಕೆ ಮಾಡುತ್ತಾರೆ ಎಂದು  ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ಬಿವೈವಿಗೆ ಸಚಿವ ಯತೀಂದ್ರ ತಿರುಗೇಟು jk02_new jk02 new

Key words: Siddaramaiah MLAs, supporters, protest, Minister, Yathindra, BYV