Thursday, September 17, 2026

BDA Apartments

Home Front Page ಕಬಿನ ಜಲಾಶಯ ಬಹುತೇಕ ಭರ್ತಿ: ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ

ಕಬಿನ ಜಲಾಶಯ ಬಹುತೇಕ ಭರ್ತಿ: ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ

ಮೈಸೂರು,ಆಗಸ್ಟ್,1,2026 (www.justkannada.in): ಕೇರಳ ವಯನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ  ಬೀಚನಹಳ್ಳಿಯಲ್ಲಿರುವ ಕಬನಿ ಜಲಾಶಯ ಬಹುತೇಕ ಭರ್ತಿ ಯಾವುದೇ ಕ್ಷಣದಲ್ಲಿ ಡ್ಯಾಮ್ ನಿಂದ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕಾವೇರಿ ನೀರಾವರಿ ನಿಗಮ ಕಬಿನಿ ಡ್ಯಾಂ ನಿಂದ 8 ರಿಂದ 10 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಬಿಡುವ ಸಾಧ್ಯತೆ ಇದೆ. ಪ್ರಸ್ತುತ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್ ಒಳಹರಿವು ಇದೆ ಎಂದು ತಿಳಿಸಿದೆ.ಕಬಿನ ಜಲಾಶಯ ಬಹುತೇಕ ಭರ್ತಿ BDA JK_Adv BDA Adv

ಆದರೆ  ನದಿಗೆ ಕಬಿನ ಜಲಾಶಯದಿಂದ ನೀರು ಬಿಡಲು ರೈತರು ವಿರೋಧ ವ್ಯಕ್ತಪಡಿಸಿದ್ದು ನದಿಗೆ ನೀರು ಬಿಡುವ ಬದಲು ನಾಲೆಗಳಿಗೆ ನೀರು ಹರಿಸಿ ಎಂದು ಆಗ್ರಹಿಸಿದ್ದಾರೆ.ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ jk02_new jk02 new

Key words: Kabina reservoir, almost, full, Water, release, any moment