Monday, September 14, 2026

BDA Apartments

Home Front Page ತಮಿಳುನಾಡಿಗೆ ನೀರು ಬಿಡಲು CWMA ಆದೇಶ : ಮಂಡ್ಯದಲ್ಲಿ ಮತ್ತೆ ಪ್ರತಿಭಟನೆ ಶುರು, ರಸ್ತೆ ತಡೆದು...

ತಮಿಳುನಾಡಿಗೆ ನೀರು ಬಿಡಲು CWMA ಆದೇಶ : ಮಂಡ್ಯದಲ್ಲಿ ಮತ್ತೆ ಪ್ರತಿಭಟನೆ ಶುರು, ರಸ್ತೆ ತಡೆದು ಆಕ್ರೋಶ

ಮಂಡ್ಯ,ಜುಲೈ,30,2026 (www.justkannada.in): ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 3,500 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದ್ದ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶವನ್ನ ಸಿಡಬ್ಲ್ಯು ಎಂಎ ಎತ್ತಿಹಿಡಿದ ಬೆನ್ನಲ್ಲೆ ಮಂಡ್ಯದಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದೆ.

ಸಿಡಬ್ಲ್ಯು ಎಂಎ ಆದೇಶ ಖಂಡಿಸಿ ರೈತರು ಮಂಡ್ಯದ ಸಂಜಯ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.  ಪ್ರತಿಭಟನೆ ವೇಳೆ ರಸ್ತೆ ಮಧ್ಯದಲ್ಲೇ ಟೈರ್ ಗೆ ಬೆಂಕಿ ಹಚ್ಚಲು ಮುಂದಾಗಿದ್ದು  ಈ ವೇಳೆ ಪೊಲೀಸರು ಟೈರ್ ಅನ್ನು ಕಿತ್ತುಕೊಂಡಿದ್ದಾರೆ.ತಮಿಳುನಾಡಿಗೆ ನೀರು ಬಿಡಲು CWMA ಆದೇಶ mandya1

ಸಿಡಬ್ಲ್ಯು ಎಂಎ ವಿರುದ್ದ ಪ್ರತಿಭಟನಾನಿರತ ರೈತರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಮಂಡ್ಯದಲ್ಲಿ ಮತ್ತೆ ಪ್ರತಿಭಟನೆ ಶುರು jk02_new jk02 new

Key words: CWMA, orders, Protests, Mandya,