ಲೋಕಾಯುಕ್ತ ಬಲೆ: ಎಪಿಪಿ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಂಧನ

ಕಲಬುರಗಿ,ಜುಲೈ,17,2026 (www.justkannada.in): ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, 5ನೇ ಜೆಎಂಎಫ್‌ ಸಿ ನ್ಯಾಯಾಲಯದ ಹೆಚ್ಚುವರಿ ಸರ್ಕಾರಿ ಅಭಿಯೋಜಕ (ಎಪಿಪಿ) ಸಂತೋಷ್ ಕುಮಾರ್ ಲೋಕಂಡೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಹೈದರಾಬಾದ್ ಮೂಲದ ರಾಹುಲ್ ಎಂಬ ದೂರುದಾರರಿಂದ ನ್ಯಾಯಾಲಯಕ್ಕೆ ರಾಜಿ ಅರ್ಜಿ ಸಲ್ಲಿಸುವ ಸಂಬಂಧ ಬಾಕಿ ಕೆಲಸ ಮಾಡಿಕೊಡುವುದಾಗಿ ಹೇಳಿ ₹10,000 ನಗದು ಹಾಗೂ 9 ಸೀರೆಗಳು, 4 ಶರ್ಟ್‌ಗಳು, 4 ಜೀನ್ಸ್ ಪ್ಯಾಂಟ್‌ ಗಳು, ಒಂದು ಜೋಡಿ ಶೂ, 4 ಮಹಿಳೆಯರ ಉಡುಪುಗಳು ಮತ್ತು 6 ಜೋಡಿ ಮಹಿಳೆಯರ ಚಪ್ಪಲಿಗಳನ್ನು ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ.

ದೂರುದಾರರ ಮಾಹಿತಿಯ ಮೇರೆಗೆ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಕುಮಾರ್ ನೇತೃತ್ವದಲ್ಲಿ ಬಲೆ ಬೀಸಲಾಗಿದ್ದು, ನ್ಯಾಯಾಲಯ ಸಂಕೀರ್ಣದ ಬಳಿ ₹10,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಸಂತೋಷ್ ಕುಮಾರ್ ಲೋಕಂಡೆ ಅವರನ್ನು ರೆಡ್‌ ಹ್ಯಾಂಡ್ ಆಗಿ ಹಿಡಿದು ಬಂಧಿಸಲಾಗಿದೆ.

ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ENGLISH SUMMARY..

Lokayukta Trap: APP Caught Accepting ₹10,000 Bribe in Kalaburagi
Kalaburagi: In a Lokayukta operation conducted under the guidance of Superintendent of Police Siddaraju C., Additional Public Prosecutor (APP) Santosh Kumar Lokande of the 5th JMFC Court was caught red-handed while allegedly accepting a ₹10,000 bribe.
The complainant, Rahul from Hyderabad, alleged that the APP had demanded ₹10,000 in cash along with several clothing items, including sarees, shirts, jeans, shoes, women’s dresses, and slippers, for processing a compromise petition pending before the court.
Based on the complaint, Lokayukta Police Inspector Arun Kumar laid a trap and apprehended the accused near the court complex while accepting the bribe. Further investigation is underway.

Key words: Lokayukta, Trap, APP, Acceptin, Bribe, Kalaburagi