Wednesday, August 26, 2026

BDA Apartments

Home Front Page ಅಕ್ಟೋಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗುತ್ತೆ- ಸಚಿವ ಈಶ್ವರ್ ಖಂಡ್ರೆ

ಅಕ್ಟೋಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗುತ್ತೆ- ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು,ಜುಲೈ.11,2026 (www.justkannada.in): ಸ್ಥಳೀಯ ಸಂಸ್ಥೆಗಳ ಚುನಾವಣೆ ಯಾವಾಗ ನಡೆಯುತ್ತೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಅಕ್ಟೋಬರ್ ಒಳಗೆ ಗ್ರಾಮ ಪಂಚಾಯತ್, ಪಟ್ಟಣ .ಪಂಚಾಯತ್, ತಾಲ್ಲೂಕು ಪಂಚಾಯತ್,  ಜಿಲ್ಲಾ ಪಂಚಾಯತ್, ಚುನಾವಣೆ ಆಗುತ್ತೆ. ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಮುಗಿದಿದೆ.  ಆಡಳಿತಾದಿಕಾರಿಗಳಿಂದ ಸ್ಥಳೀಯ ಸಂಸ್ಥೆ ಆಡಳಿತ ನಡೆಯುತ್ತಿದೆ ಎಂದರು.

ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ನಿಗದಿ ಕಾರ್ಯ ಶುರುವಾಗಿದೆ.  ಶೀಘ್ರದಲ್ಲೇ ಸ್ಥಳಿಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಆಸಕ್ತಿ  ಹೊಂದಿದೆ. ಅಕ್ಟೋಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗುತ್ತದೆ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.

Key words: Local body, elections, October, Minister, Ishwar Khandre