Friday, October 9, 2026

BDA Apartments

Home DASARA-2026 MYSORE DASARA; ಸಿಎಂ ಡಿಕೆಶಿ ನೇತೃತ್ವದಲ್ಲಿ ಇಂದು “ಹೈಪವರ್ ಕಮಿಟಿ” ಸಭೆ.

MYSORE DASARA; ಸಿಎಂ ಡಿಕೆಶಿ ನೇತೃತ್ವದಲ್ಲಿ ಇಂದು “ಹೈಪವರ್ ಕಮಿಟಿ” ಸಭೆ.

ಮೈಸೂರು,ಜುಲೈ,10,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಿದ್ಧತೆಗೆ ವೇಗ ನೀಡಲಾಗಿದ್ದು, ರಾಜ್ಯದ ನಾಡಹಬ್ಬಕ್ಕೆ ಭವ್ಯ ರೂಪ ನೀಡಲು ಸರ್ಕಾರದ ಸಿದ್ಧತೆ ನಡೆಸುತ್ತಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಉನ್ನತ ಮಟ್ಟದ ಸಭೆ ನಡೆಯಲಿದೆ. ಸಭೆಯಲ್ಲಿ ಮೈಸೂರು ದಸರಾ ಮಹೋತ್ಸವದ ದಿನಾಂಕ ಅಂತಿಮಗೊಳಿಸುವ ಕುರಿತು ಚರ್ಚೆ ನಡೆಯಲಿದ್ದು,  ಜಂಬೂಸವಾರಿ, ಯುವ ದಸರಾ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳ ರೂಪುರೇಷೆ ಬಗ್ಗೆ ನಿರ್ಧಾರ ಮಾಡಲಿದೆ. ದಸರಾ ಉದ್ಘಾಟಕರ ಹೆಸರಿನ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಇದ್ದು ಈ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ.MYSORE DASARA; ಸಿಎಂ ಡಿಕೆಶಿ ನೇತೃತ್ವದಲ್ಲಿ ಇಂದು “ಹೈಪವರ್ ಕಮಿಟಿ” ಸಭೆ jambusavari abimanyu- mysore ...

ಹಾಗೆಯೇ ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸರ್ಕಾರದ ಚಿಂತನೆ ನಡೆಸಿದ್ದು, ಕಂಬಳ ಸ್ಪರ್ಧೆ ನಡೆಸುವ ಸ್ಥಳದ ಕುರಿತು ಹೈಪವರ್ ಸಮಿತಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.MYSORE DASARA

ಮೈಸೂರು ದಸರಾ ವೀಕ್ಷಿಸಲು ನಾನಾ ಭಾಗಗಳಿಂದ ಲಕ್ಷಾಂತರ ಜನರು ಆಗಮಿಸಲಿದ್ದು ಈ ಹಿನ್ನೆಲೆಯಲ್ಲಿ  ಭದ್ರತೆ, ಸ್ವಚ್ಛತೆ, ಮೂಲಸೌಕರ್ಯ ಹಾಗೂ ಪ್ರವಾಸೋದ್ಯಮ ಉತ್ತೇಜನ ಕುರಿತೂ ಸಹ ಸಭೆಯಲ್ಲಿ ಚರ್ಚೆಯಾಗಲಿದೆ.ಸಿಎಂ ಡಿಕೆಶಿ ನೇತೃತ್ವದಲ್ಲಿ ಇಂದು "ಹೈಪವರ್ ಕಮಿಟಿ" ಸಭೆ jk02_new jk02 new

ಮೈಸೂರು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

Key words: MYSORE DSAARA, Hyper Committee meeting, today, CM DK Shivakumar