ಲಂಚ ಸ್ವೀಕರಿಸಿದ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್

ಕಲಬುರಗಿ,ಜುಲೈ,9,2026 (www.justkannada.in):  ನಾಡಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ  ಗುತ್ತಿಗೆ ನೌಕರನ ಬಳಿ ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸೇರಿ ಇಬ್ಬರು ಆರೋಪಿಗಳಿಗೆ 4 ವರ್ಷ ಜೈಲು ಶಿಕ್ಷೆ ಮತ್ತು ತಲಾ 20 ಸಾವಿರ ರೂ. ದಂಡ ವಿಧಿಸಿ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಅಧಿಕಾರಿ ಶಶಿಕಲಾ ಪಾದಗಟ್ಟಿ, 2ನೇ ಆರೋಪಿ ಶಿವಾನಂದ ಜೈಲು ಶಿಕ್ಷೆಗೆ ಗುರಿಯಾದವರು. ಅಫಜಲಪೂರ ತಾಲೂಕಿನ ಕರಜಗಿ ತಹಶೀಲ್ದಾರ್  ಆಫೀಸ್ ನ ನಾಡ ಕಛೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ  ಡಾಟಾ ಎಂಟ್ರಿ ಅಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಲಿಂಗಯ್ಯ ಬಸಯ್ಯ ಮಠ ಎಂಬುವವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಅವರು, ಅವರು ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ, ಎರಡು ಪಕ್ಷದವರ ವಾದ ಪ್ರತಿವಾದವನ್ನು ಆಲಿಸಿದ ನಂತರ 1ನೇ ಆರೋಪಿಗೆ ಕಲಂ 7 13(1)(ಡಿ) ಸಂಗಡ 13(2) ಮತ್ತು 2ನೇ ಆರೋಪಿ ಶಿವಾನಂದ ಖಾಸಗಿ ವ್ಯಕ್ತಿ ಇವರಿಗೆ ಕಲಂ 8 ಲಂಚ ಪ್ರತಿಬಂಧಕ ಕಾಯ್ದೆ ಅಡಿ ಪ್ರತಿಯೋಬ್ಬರಿಗೆ 4 ವರ್ಷ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ವಿವರ..

ಪ್ರಕರಣ ನಡೆದಿದ್ದು 2017ರಲ್ಲಿ. ಕರಜಗಿ ನಾಡ ಕಛೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರಿ ಅಪರೇಟರ್  ಕೆಲಸ ಮಾಡುತ್ತಿದ್ದು, ಇವರ ವಿರುದ್ಧ ಸಾರ್ವಜನಿಕರಿಂದ ಹಣ ಪಡೆಯುತ್ತಾನೆಂದು ಆರೋಪ ಕೇಳಿ ಬಂದಿತ್ತು.  ಈ ವೇಳೆ  ಸಾರ್ವಜನಿಕರು ಅಫಜಲಪುರ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಇವರಿಗೆ ಸಾರ್ವಜನಿಕರು ದೂರು ನೀಡಿದ್ದರು.

ಈ ಮಧ್ಯೆ ಫಿರ್ಯಾದಿ ಶಿವಲಿಂಗಯ್ಯ ಬಸಯ್ಯ ಮಠ ಸಾರ್ವಜನಿಕರು ನೀಡಿದ ಅರ್ಜಿಯ ಬಗ್ಗೆ ವಿಚಾರಿಸಲು ಎ.ಸಿ. ರವರ ಕಾರ್ಯಾಲಯಕ್ಕೆ ಸಲ್ಲಿಸಿದ ವರದಿ ಬಗೆಹರಿಸುವಂತೆ ಮನವಿ ಮಾಡಲು ತಹಶೀಲ್ದಾರ್ ರಿಗೆ ಮನವಿ ಮಾಡಿದ್ದರು. ಈ ವೇಳೆ ತಹಶೀಲ್ದಾರ್  ಶಶಿಕಲಾ ಪಾದಗಟ್ಟಿ ದಿನಾಂಕ:28.08.2017 ರಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು, ದಿ:31.08.2017 ರಂದು ಫಿರ್ಯಾದಿ ನೀಡಿದ್ದು,  ಈ ಕುರಿತು ಪ್ರಕರಣ ದಾಖಲಾಗಿತ್ತು.

ಶ್ರೀ ಕೃಷ್ಣಪ್ಪಾ ಕಲ್ಲದೇವರ ತನಿಖೆ ನಡೆಸಿ ತಹಶೀಲ್ದಾರ್ ಶಶಿಕಲಾ ಪಾದಕಟ್ಟಿ ಹಣವನ್ನು 2ನೇ ಆರೋಪಿ ಶಿವಾನಂದ ತಂದೆ ವಿವೇಕಾನಂದ ಜಮಖಂಡಿ ಇವರಿಗೆ ಲಂಚದ ಹಣ ಸ್ವೀಕರಿಸಲು ಹೇಳಿದ್ದರು. ಇವರ ಕಡೆಯಿಂದ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್ ಶಶಿಕಲಾ ಪಾದಕಟ್ಟಿ ಸಿಕ್ಕಿಬಿದ್ದಿದ್ದರಿಂದ ಇವರ ವಿರುದ್ಧ ಕಲಂ 7, 13.(1)(ಡಿ) ಸಂಗಡ 13(2) ಪಿ.ಸಿ. ಕಾಯ್ದೆ ಅಡಿಯಲ್ಲಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲಾಗಿತ್ತು.

ಸರಕಾರದ ಪರವಾಗಿ ಚಾಂದಕವಠ, ವಿಶೇಷ ಸರಕಾರಿ ಅಭಿಯೋಜಕ ಅಶೋಕ.ಎಸ್ ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಕಲಬುರಗಿಯ ಲೋಕಾಯುಕ್ತ ಪೊಲೀಸ ಠಾಣೆಯ ಸಿಬ್ಬಂದಿ ಹಣಮಂತರಾಯ HC ಹಾಗೂ ಗುಂಡುರಾವ PC ರವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದರು.

Key words: Court, sentences, 4 years, officer, Prison sentence, fine, bribe