ಬೆಂಗಳೂರು,ಜುಲೈ,9,2026 (www.justkannada.in): ಅಂತರ ಎಸ್ಕಾಂಗಳ (2025 -26) ಕ್ರೀಡಾ ಕೂಟ ಜುಲೈ 7 ಹಾಗೂ 8 ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿತು.
ಕ್ರೀಡಾಕೂಟವನ್ನು ಬೆಸ್ಕಾಂ ಎಂಡಿ ಡಾ. ಎನ್. ಶಿವಶಂಕರ್ ಉದ್ಘಾಟಿಸಿದರು. ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್ ಹಾಗೂ ಕೆಪಿಟಿಸಿಎಲ್ ನೌಕರರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ವಿದ್ಯುತ್ ಕಂಪನಿಗಳ ನೌಕರರು ಕೆಲಸದ ಜೊತೆ ಜೊತೆಗೆ ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಬಿಡುವಿನ ಸಮಯದಲ್ಲಿ ಯಾವುದಾದರು ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಸ್ಕಾಂ ಪ್ರಥಮ ಸ್ಥಾನ ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು. ಸೆಸ್ಕ್ ಎರಡನೇ ಸ್ಥಾನ ಪಡೆಯಿತು.
ಪುರುಷರ ವಿಭಾಗದಲ್ಲಿ ಬೆಸ್ಕಾಂನ ಜಿ.ಕೆ ಬೈರೇಶ್ ಮೂರ್ತಿ ಹಾಗೂ ಹೆಸ್ಕಾಂನ ಮುಬಾರಕ್ ಪುರುಷ ಚಾಂಪಿಯನ್ ಗಳಾಗಿ ಮತ್ತು ಮಹಿಳೆಯರ ವಿಭಾಗದಲ್ಲಿ ಮಮತಾ ಎಚ್ ಆರ್ ಅವರು ಮಹಿಳಾ ಚಾಂಪಿಯನ್ನಾಗಿ ಹೊರಹೊಮ್ಮಿದರು.
ಕ್ರೀಡಾಕೂಟ ಅಧ್ಯಕ್ಷರಾಗಿ ಶ್ರೀಕಾಂತ್ ಎಂ ಸಸಾಲಟ್ಟಿ, ಮುಖ್ಯ ಇಂಜಿನಿಯರ್(ವಿ), ಕವಿಪ್ರನಿನಿ ನಿರ್ದೇಶಕರು (ಯೋಜನೆ ) ಗಿರಿಧರ್ ಕುಲಕರ್ಣಿ, ಬೆಸ್ಕಾಂ ತಾಂತ್ರಿಕ ನಿರ್ದೇಶಕರು ಹೆಚ್ ಜೆ ರಮೇಶ್, ಕೆಪಿಟಿಸಿಎಲ್ ಅಧ್ಯಕ್ಷ ಬಲರಾಮ್, ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಸಿ, ಬಸವಣ್ಣ, ಅಕೌಂಟ್ ಆಫೀಸರ್ ಅಸೋಸಿಯನ್ ಅಧ್ಯಕ್ಷ ಗಿರೀಶ್, ಬೆಸ್ಕಾಂ ಕ್ರೀಡಾ ಕಾರ್ಯದರ್ಶಿ ವಿ.ಜಿ ಸರ್ವೇಶ್, ಪ್ರಧಾನ ಕಾರ್ಯದರ್ಶಿ ಕವಿಪ್ರನಿನಿ ಕ್ರೀಡಾ ಸಂಸ್ಥೆ ಮೈಕಲ್ ವಾಷಿಂಗ್ಟನ್, ಡಿ ಎಚ್ ಉಮೇಶ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Key words: Inter-Escom, Sports, BESCOM, champions







