Thursday, October 8, 2026

BDA Apartments

Home Front Page ಕೊಡಗು ಜಿಲ್ಲೆಯ ಜ್ವಲಂತ ಭೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ- ಸಂಸದ...

ಕೊಡಗು ಜಿಲ್ಲೆಯ ಜ್ವಲಂತ ಭೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ- ಸಂಸದ ಯದುವೀರ್

ಮೈಸೂರು,ಜುಲೈ,7,2026 (www.justkannada.in): ಕೊಡಗು ಜಿಲ್ಲೆಯ ಜ್ವಲಂತ ಭೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಂಸದ ಯದುವೀರ್, ಕೊಡಗು ಜಿಲ್ಲೆಯ ದಶಕಗಳ ಜ್ವಲಂತ ಸಮಸ್ಯೆಯಾದ ‘ಸಿ ಅಂಡ್ ಡಿ’ (ಅ & ಆ) ವರ್ಗದ ಜಮೀನುಗಳು, ಸಿಸಿ ((Cardamom Cultivation), ಪೈಸಾರಿ ಮತ್ತು ಜಮ್ಮಾ ಭೂಮಿಗಳ ಹಕ್ಕು ಹಸ್ತಾಂತರ ಹಾಗೂ ಸಕ್ರಮ ಪ್ರಕ್ರಿಯೆಯು ಪ್ರಸ್ತುತ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಈ ಕುರಿತು ರಾಜ್ಯ ಸರ್ಕಾರವು ತಕ್ಷಣವೇ ದಿಟ್ಟ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು  ಒತ್ತಾಯಿಸಿದ್ದಾರೆ.ಕೊಡಗು ಜಿಲ್ಲೆಯ ಜ್ವಲಂತ ಭೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತು ...

ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಯಾವುದೇ ರೀತಿಯ ಸಹಕಾರ, ಅರಣ್ಯ ಕಾಯ್ದೆಗಳ ತಿದ್ದುಪಡಿ ಅಥವಾ ವಿಶೇಷ ಅನುಮೋದನೆಗಳ ಅಗತ್ಯವಿದ್ದಲ್ಲಿ, ತಾವು ವೈಯಕ್ತಿಕವಾಗಿ ಮುತುವರ್ಜಿ ವಹಿಸಿ ಕೇಂದ್ರದಿಂದ ಸಂಪೂರ್ಣ ಸಹಕಾರ ಕೊಡಿಸಲು ಸಿದ್ಧರಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.ಕೊಡಗು ಜಿಲ್ಲೆಯ ಜ್ವಲಂತ ಭೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತು ...

Key words: government, land issues,  Kodagu district, MP Yaduveer