Friday, October 9, 2026

BDA Apartments

Home Front Page ವಯನಾಡಿನಲ್ಲಿ ಭೀಕರ  ಗುಡ್ಡ ಕುಸಿತ; ಮೂವರು ಸಾವು

ವಯನಾಡಿನಲ್ಲಿ ಭೀಕರ  ಗುಡ್ಡ ಕುಸಿತ; ಮೂವರು ಸಾವು

ವಯನಾಡ್​,ಜುಲೈ,7,2026 (www.justkannada.in):  ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆಯುತ್ತಿರುವ ಟ್ವಿನ್-ಟನಲ್ ಯೋಜನಾ ಕಾಮಗಾರಿ ಸ್ಥಳದಲ್ಲಿ ಸಂಭವಿಸಿರುವ ಭಾರೀ ಪ್ರಮಾಣದ ಗುಡ್ಡ ಕುಸಿತದಿಂದ ಮೂವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭೂಕುಸಿತದಲ್ಲಿ ಸುಮಾರು ಏಳು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು. ಮೂವರು ಮೃತಪಟ್ಟಿದ್ದಾರೆ. ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಯನಾಡ್​ನಲ್ಲಿನ ಮೆಪ್ಪಾಡಿ ಬಳಿಯ ಕಲ್ಲಾಡಿಯ ಹತ್ತಿರ ಭಾರಿ ಭೂಕುಸಿತ ಸಂಭವಿಸಿದೆ.ವಯನಾಡಿನಲ್ಲಿ ಭೀಕರ ಗುಡ್ಡ ಕುಸಿತ; ಮೂವರು ಸಾವು land

ಅಧಿಕಾರಿಗಳ ಪ್ರಕಾರ, ಕಲ್ಲಾಡಿಯ ಮೀನಾಕ್ಷಿ ಸೇತುವೆ ಬಳಿ ಈ ಭೂ ಕುಸಿತ ಸಂಭವಿಸಿದೆ. ಇಲ್ಲಿ ವಯನಾಡ್​ ಜಿಲ್ಲೆ ಮತ್ತು ಮಲ್ಲಪುರಂಗೆ ಸಂಪರ್ಕಿಸುವ ರಸ್ತೆ ಸುರಂಗ ಮಾರ್ಗದ ಯೋಜನೆ ಕಾರ್ಯ ಸಾಗುತ್ತಿತ್ತು. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಈ ವರದಿಯಾಗುತ್ತಿದ್ದಂತೆ ಕಲ್ಲಪೆಟ್ಟದಿಂದ ಅಗ್ನಿಶಾಮಕ ದಳ ಮತ್ತು ರಕ್ಷಣಾ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ.ವಯನಾಡಿನಲ್ಲಿ ಭೀಕರ ಗುಡ್ಡ ಕುಸಿತ jk02_new jk02 new

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೇರಳ ಸಿಎಂ  ವಿ.ಡಿ. ಸತೀಶನ್ ತುರ್ತು ಸಭೆ  ನಡೆಸಿದ್ದು ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಸಚಿವರಾದ ಟಿ. ಸಿದ್ದಿಕ್ ಮತ್ತು ಎ. ಪಿ. ಅನಿಲ್ ಕುಮಾರ್ ಅವರಿಗೆ ಸ್ಥಳಕ್ಕೆ ತೆರಳಿ ಉಸ್ತುವಾರಿ ನೋಡಿಕೊಳ್ಳುವಂತೆ ಆದೇಶಿಸಿದರು.

Key words: landslide, Wayanad, three dead