Thursday, October 8, 2026

BDA Apartments

Home Front Page ಬರ ಪರಿಸ್ಥಿತಿ ನಿರ್ವಹಣೆ ನಿರ್ಲಕ್ಷ್ಯ ತೋರಿಸಿದ್ರೆ ಕ್ರಮ- ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

ಬರ ಪರಿಸ್ಥಿತಿ ನಿರ್ವಹಣೆ ನಿರ್ಲಕ್ಷ್ಯ ತೋರಿಸಿದ್ರೆ ಕ್ರಮ- ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

ಕಲಬುರುಗಿ,ಜುಲೈ,7,2026 (www.justkannada.in):  ಬರ ಪರಿಸ್ಥಿತಿ ನಿರ್ವಹಣೆ ನಿರ್ಲಕ್ಷ್ಯ ತೋರಿಸಿದರೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.

ಇಂದು ಕಲಬುರುಗಿಯಲ್ಲಿ ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಡಿಕೆ ಶಿವಕುಮಾರ್, ಅಭಿವೃದ್ದಿ ವಿಚಾರದಲ್ಲಿ ನೆಪ ಕೇಳಲು ನಾನು ಸಿದ್ದನಿಲ್ಲ. ನನಗೆ ನೆಪ ಬದಲು ಫಲಿತಾಂಶ ಮುಖ್ಯ  ಪರಿಶುದ್ಧದ ಜನಪರ ಸಮಾನತೆಯೇ ಆಡಳಿತವೇ ನನ್ನ ಗುರಿ.  ಕಟ್ಟಕಡೆಯ ವ್ಯಕ್ತಿಗೂ ನಾಗರಿಕ ಹಕ್ಕು ತಲುಪಬೇಕು. ಪ್ರತಿ ಹಂತದಲ್ಲಿ ಆಡಳಿತ ಏನಾಗುತ್ತೆ ಎಂಬುದರ ಅರಿವು ನನಗಿದೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷನಿಂದ ಇಲ್ಲಿವರೆಗೆ ಬಂದಿದ್ದೇನೆ.  ನಾಣು ಬಸವಾದಿ ಶರಣರ ಸಮಾನತೆಯ ತತ್ವವನ್ನು ನಂಬಿದವನು ಎಂದರು.

ಬಸವಕಲ್ಯಾಣದಿಂದ ಉತ್ತರ ಕರ್ನಾಟಕದ  ಪ್ರವಾಸ ಆರಂಭಿಸಿದ್ದೇನೆ. ಜನಪರವಾಗಿ ಕೆಲಸ ಮಾಡದಿದ್ದರೇ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಖಡಕ್  ವಾರ್ನಿಂಗ್ ಕೊಟ್ಟರು.ಬರ ಪರಿಸ್ಥಿತಿ ನಿರ್ವಹಣೆ ನಿರ್ಲಕ್ಷ್ಯ ತೋರಿಸಿದ್ರೆ ಕ್ರಮ jk02_new jk02 new

Key words: CM, DK Shivakumar, Khadak warns, officer,