ಸುಪ್ರೀಂ ಆದೇಶದ ಮೇರೆಗೆ ಫುಟ್ ಪಾತ್ ತೆರವು ಕಾರ್ಯಾಚರಣೆ- ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಜುಲೈ,1,2026 (www.justkannada.in): ಸುಪ್ರೀಂ ಕೋರ್ಟ್’ ಆದೇಶದ ಮೇರೆಗೆ ನಾವು ಫುಟ್ ಪಾತ್ ತೆರವು ಕಾರ್ಯ ಮಾಡುತ್ತಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಸಚಿವ ಕೃಷ್ಣಭೈರೇಗೌಡ ಸೂಚನೆ ಮೇರೆಗೆ ಜಿಬಿಎ ಅಧಿಕಾರಿಗಳು ಇಂದಿನಿಂದ ಬೆಂಗಳೂರಿನಲ್ಲಿ  ಫುಟ್​​​​ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗಿಳಿದಿದ್ದಾರೆ. ಜಿಬಿಎ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳಲ್ಲಿ ಒತ್ತುವರಿ ತೆರವು ಕಾರ್ಯ  ನಡೆಯುತ್ತಿದ್ದು,  ಫುಟ್ ​ಪಾತ್​ ಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡ್ತಿರುವವರು, ಹೋಟೆಲ್, ಕೆಫೆ, ಸಣ್ಣ ಪುಟ್ಟ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.

ಫುಟ್​​ಪಾತ್ ತೆರವು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ. ನೀವು ಫುಟ್ ಪಾತ್ ತೆರವು ಮಾಡಿದರೇ ಮತ್ತೆ ಇಲ್ಲೇ ವ್ಯಾಪಾರ ಮಾಡುತ್ತೇವೆ. ಈ ಸ್ಥಳ ಬಿಟ್ಟು ಹೋಗಲ್ಲ ಎಂದು ಬೀದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು 2000 ಕಿ.ಮೀ. ಮಾತ್ರ ತೆರವುಗೊಳಿಸಿ ಎಂದು ಸೂಚನೆ- ಕೃಷ್ಣ ಭೈರೇಗೌಡ

ಈ ಕುರಿತು ಮಾತನಾಡಿರುವ ಸಚಿವ ಕೃಷ್ಣಭೈರೇಗೌಡ,  ‘ಸುಪ್ರೀಂ ಕೋರ್ಟ್’ ಆದೇಶದ ಮೇರೆಗೆ ತೆರವು ಕಾರ್ಯ ಮಾಡುತ್ತಿದ್ದೇವೆ. ಇದರಿಂದ ನಾಗರಿಕರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಫುಟ್​ ಪಾತ್ ತೆರವು ಮಾಡುತ್ತಿದ್ದೇವೆ. ಬೆಂಗಳೂರು ನಗರದಲ್ಲಿ 15 ಸಾವಿರ ಕಿ.ಮೀ. ಫುಟ್​ಪಾತ್ ಇದೆ. ಆದರೆ ನಾವು 2000 ಕಿ.ಮೀ. ಮಾತ್ರ ತೆರವುಗೊಳಿಸಿ ಅಂತಾ ಹೇಳಿದ್ದೇವೆ. ಹೆಚ್ಚು ಜನರು ಓಡಾಡುವ ಕಡೆ ಮಾತ್ರ ತೆರವು ಮಾಡುತ್ತಿದ್ದೇವೆ. ಫುಟ್​ಪಾತ್ ಒತ್ತುವರಿಯಿಂದಾಗಿ ಅಪಘಾತ ಸಂಭವಿಸುತ್ತಿದ್ದು, ಫುಟ್​ಪಾತ್ ತೆರವುಗೊಳಿಸುವಂತೆ ಜನರು ಕೇಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

Key words: Foot path, clearance, operation, Minister, Krishnabhairegowda