ಸೆಸ್ಕ್ : ಗೃಹ ಜ್ಯೋತಿ ಫಲಾನುಭವಿಗಳ ಮಾಹಿತಿ ಸಂಗ್ರಹಣೆ

ಮೈಸೂರು, ಜು 01, 2026 (www.justkannada.in):  ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ (GJY) ಯೋಜನೆಯ ಫಲಾನುಭವಿಗಳ ಮನೆ-ಮನೆ ಭೇಟಿ ಹಾಗೂ ಮಾಹಿತಿ ಸಂಗ್ರಹಣೆ ಕಾರ್ಯ ಬುಧವಾರದಿಂದ(ಜುಲೈ 01) ಆರಂಭಗೊಂಡಿದ್ದು, ಗ್ರಾಹಕರು ಸಹಕರಿಸುವಂತೆ ಚಾವಿಸನಿನಿ (ಸೆಸ್ಕ್) ಕೋರಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸೆಸ್ಕ್, 2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹಜ್ಯೋತಿ ಯೋಜನೆಯ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಸೆಸ್ಕ್ ನ ಮೀಟರ್ ರೀಡರ್‌ ಗಳು ಹಾಗೂ ಸಿಬ್ಬಂದಿ, ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಹಾಗೂ ಮಾಹಿತಿ ಸಂಗ್ರಹಿಸಿ, ಮೊಬೈಲ್ ಆಪ್ ಹಾಗೂ ಘೋಷಣಾ ಪತ್ರದ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ.

ಸೆಸ್ಕ್ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ನೀಡಬೇಕಾದ ದಾಖಲಾತಿಗಳ ವಿವರ:

  1. ಆಧಾರ್ ಕಾರ್ಡ್
  2. ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  3. ಮತದಾರರ ಗುರುತಿನ ಚೀಟಿ (ವೋಟರ್ ಐಡಿ)
  4. ಪ್ಯಾನ್ ಕಾರ್ಡ್
  5. ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ)
  6. ರೇಷನ್ ಕಾರ್ಡ್
  7. ಜಾತಿ ಪ್ರಮಾಣ ಪತ್ರ (ಅನ್ವಯಿಸುವಲ್ಲಿ ಮಾತ್ರ)

ಈ ಪ್ರಕ್ರಿಯೆಗೆ ಮೀಟರ್ ರೀಡರ್‌ ಗಳ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಸೆಸ್ಕ್‌ನ ಅಧಿಕೃತ ಮೀಟರ್ ರೀಡರ್‌ ಗಳ ಗುರುತಿನ ಚೀಟಿಯನ್ನು ಪರಿಶೀಲಿಸಿ, ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೆಸ್ಕ್ ಮನವಿ ಮಾಡಿದೆ.

ENGLISH SUMMARY..

Gruha Jyothi Door-to-Door Beneficiary Data Collection Drive from July 1st

Mysuru, July 1, 2026: Chamundeshwari Electricity Supply Corporation Limited (CESC) will carry out door-to-door data collection process for all beneficiaries of the state government’s flagship ‘Gruha Jyothi Yojane’ (GJY) from July 1st.

The Gruha Jyothi Scheme, which was launched in July 2023, is undergoing a data collection process. CESC meter readers and CESC staff will visit consumers homes to collect the informations of the beneficiaries. This process will be completed on-site using a mobile application and a declaration form.

Documents Required for Data Collection:
The Energy Department has requested all beneficiaries to Furnish the following documents for verification during the on-site visit by CESC staff:

1. Aadhaar Card
2. Passport-size photograph
3. Voter ID Card
4. PAN Card
5. Tenancy or rental agreements (if applicable)
6. Ration Card
7. Caste Certificate (if applicable)

Since physical verification by the CESC meter reader is the only approved method to complete this process, beneficiaries are requested to cooperate fully with the CESC Meter readers, who will carry official identity cards, to ensure a smooth and efficient update.

Key words: Gruha Jyothi, Beneficiary, Data Collection, CESC