Sunday, September 27, 2026

BDA Apartments

ಸಸಿ ನೆಡುವುದಷ್ಟೇ ಅಲ್ಲ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಉಳಿಸುವ ಕೆಲಸ ಮಾಡಬ...
Home Front Page ಸಸಿ ನೆಡುವುದಷ್ಟೇ ಅಲ್ಲ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಉಳಿಸುವ ಕೆಲಸ ಮಾಡಬೇಕು- ಕೇಂದ್ರ ಸಚಿವ HDK...

ಸಸಿ ನೆಡುವುದಷ್ಟೇ ಅಲ್ಲ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಉಳಿಸುವ ಕೆಲಸ ಮಾಡಬೇಕು- ಕೇಂದ್ರ ಸಚಿವ HDK ಟಾಂಗ್

ಬೆಂಗಳೂರು,ಜೂನ್,27,2026 (www.justkannada.in):  ನಾಡಪ್ರಭು ಕೆಂಪೇಗೌಡರ ಜಯಂತಿ ವೇಳೆ ಕೇವಲ ಸಸಿ ನೆಡುವುದಷ್ಟೇ ಅಲ್ಲ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಉಳಿಸುವ ಕೆಲಸ ಮಾಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಗೆ  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಬಿಡದಿ ಟೌನ್ ಶಿಪ್ ವಿರೋಧಿಸಿ ಬೈರಮಂಗಲದಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಸಿಎಂ ಡಿಕೆ ಶಿವಕುಮಾರ್ 15 ಲಕ್ಷ ಸಸಿ ನೆಡಲು ಹೋಗಿದ್ದಾರೆ. ಬಿಡದಿಯಲ್ಲಿ 10 ಲಕ್ಷ ಮರ ಕಟಾವು ಮಾಡಲು ಮುಂದಾಗಿದ್ದಾರೆ. ಕೆಂಪೇಗೌಡ ಜಯಂತಿ ದಿನಾಚರಣೆ ವೇಳೆ ಸಸಿ ನೆಡುವುದಷ್ಟೇ ಅಲ್ಲ. ಕೆಂಪೇಗೌಡ ಕಟ್ಟಿದ ಬೆಂಗಳೂರನ್ನ ಉಳಿಸುವ ಕೆಲಸ ಮಾಡಬೇಕು ಎಂದರು.ಸಸಿ ನೆಡುವುದಷ್ಟೇ ಅಲ್ಲ BDA JK_Adv BDA Adv

ಟೌನ್ ಶಿಪ್ ವಿರೋಧಿಸಿ 480 ದಿನದಿಂದ ಹೋರಾಟ ನಡೆಯುತ್ತಿದೆ. ಮಹಿಳೆಯರು ಸೇರಿದಂತೆ ನೂರಾರು ರೈತರಿಂದ ನಿರಂತರ ಹೋರಾಟ ನಡೆಯುತ್ತಿದೆ.  ಟೌನ್ ಶಿಪ್ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಅಹ್ವಾನಿಸಿದ್ದೆ.  ಸಿಎಂ ಡಿಕೆಶಿಯನ್ನು ಬೀದಿಯಲ್ಲಿ ನಿಲ್ಲಿಸಬೇಕೆಂಬ  ಉದ್ದೇಶವಿಲ್ಲ. ಬಾಧಿತ ರೈತರ ಜೊತೆ ಮುಕ್ತವಾಗಿ ಚರ್ಚೆ ನಡೆಸಲಿ ಎಂದು ಕರೆದಿದ್ದೆ.  ರೈತರು ಸಮಸ್ಯೆ ಖುದ್ದಾಗಿ ಆಲಿಸಲಿ ಎಂದು ಕರೆದಿದ್ದೆ ಎಂದು ಹೆಚ್ ಡಿಕೆ ತಿಳಿಸಿದರು.ಕೆಂಪೇಗೌಡರು ಕಟ್ಟಿದ ಬೆಂಗಳೂರು ಉಳಿಸುವ ಕೆಲಸ ಮಾಡಬೇಕು jk02_new jk02 new

Key words: Bidadi township, Union Minister, HDK ,CM DK Shivakumar