Thursday, September 24, 2026

BDA Apartments

Home Front Page ತುಂಗಭದ್ರಾ ಡ್ಯಾಂನ ನೂತನ ಕ್ರಸ್ಟ್ ಗೇಟ್‌ ಗಳು ಲೋಕಾರ್ಪಣೆ

ತುಂಗಭದ್ರಾ ಡ್ಯಾಂನ ನೂತನ ಕ್ರಸ್ಟ್ ಗೇಟ್‌ ಗಳು ಲೋಕಾರ್ಪಣೆ

ಕೊಪ್ಪಳ, ಜೂನ್,25,2026 (www.justkannada.in): ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶಕ್ಕೆ ನೀರಾವರಿಗೆ ಆಧಾರವಾಗಿರುವ ತುಂಗಭದ್ರಾ ಜಲಾಶಯಕ್ಕೆ ಹೊಸದಾಗಿ ಅಳವಡಿಸಲಾಗಿರುವ 33 ಕ್ರಸ್ಟ್ ಗೇಟ್ ಗಳನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ನಲ್ಲಿ ಇಂದು ಕರ್ನಾಟಕ ಸಿಎಂ ಡಿಕೆ ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಆಂಧ್ರ ಸಿಎಂ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್  ಅವರು ಬಟನ್ ಒತ್ತುವ  ಮೂಲಕ ತುಂಗಭದ್ರಾ ಡ್ಯಾಂನ ನೂತನ ಕ್ರಸ್ಟ್ ಗೇಟ್‌ ಗಳನ್ನು ಉದ್ಘಾಟಿಸಿದರು.

ತುಂಗಭದ್ರಾ ಡ್ಯಾಂನ ನೂತನ ಕ್ರಸ್ಟ್ ಗೇಟ್‌ ಗಳು ಲೋಕಾರ್ಪಣೆ BDA JK_Adv BDA Adv
51 ಕೋಟಿ ರೂ. ವೆಚ್ಚದಲ್ಲಿ 33 ಕ್ರಸ್ಟ್ ಗೇಟ್ ಗಳನ್ನ ಅಳವಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು, ಶಾಸಕರು ಹಾಗೂ ವಿವಿಧ ಜನಪ್ರತಿನಿಧಿಗಳು ಸಹ ಉಪಸ್ಥಿತರಿದ್ದರು.ತುಂಗಭದ್ರಾ ಡ್ಯಾಂನ ನೂತನ ಕ್ರಸ್ಟ್ ಗೇಟ್‌ ಗಳು ಲೋಕಾರ್ಪಣೆ tb dam

2024ರ ಆಗಸ್ಟ್‌ 10ರಂದು ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರೆಸ್ಟ್‌ಗೇಟ್ ಕೊಚ್ಚಿಕೊಂಡು ಹೋಗಿತ್ತು. ಪರಿಣಾಮವಾಗಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗಿತ್ತು. ನಂತರ ತಜ್ಞರ ಸಲಹೆ ಮೇರೆಗೆ ಸ್ಟಾಪ್‌ ಲಾಗ್​​ ಗೇಟ್​​ ಅಳವಡಿಸಿ ನೀರಿನ ಹರಿವನ್ನು ನಿಯಂತ್ರಿಸಲಾಗಿತ್ತು. ನಂತರ ಸರ್ಕಾರ ಎಲ್ಲ 33 ಕ್ರೆಸ್ಟ್‌ಗೇಟ್‌ಗಳನ್ನು ಬದಲಿಸುವ ಮಹತ್ವದ ನಿರ್ಧಾರ ಕೈಗೊಂಡಿತ್ತು.justkannada jk02_new jk02 new

Key words: Tungabhadra Dam,  new crest gates, inaugurated