Friday, September 18, 2026

BDA Apartments

Home Front Page ‘ರಸ್ತೆ ಮಾಡೋದು ಏನ್ ರಾಕೆಟ್ ಸೈನ್ಸಾ?’ ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಕ್ಲಾಸ್

‘ರಸ್ತೆ ಮಾಡೋದು ಏನ್ ರಾಕೆಟ್ ಸೈನ್ಸಾ?’ ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಕ್ಲಾಸ್

ಬೆಂಗಳೂರು,ಜೂನ್,16,2026 (www.justkannada.in): ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಭೈರೇಗೌಡ ಇಂದು ಖಾತೆ ವಹಿಸಿಕೊಂಡು ಮೊದಲ ಸಭೆ ನಡೆಸಿದ್ದಾರೆ.

ಇಂದು ಜಿಬಿಎ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿ ಚರ್ಚಿಸಿದ ಸಚಿವ ಕೃಷ್ಣಭೈರೇಗೌಡ ಬೆಂಗಳೂರು ರಸ್ತೆ ಗುಂಡಿಗಳ ವಿಚಾರಕ್ಕೆ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.

ಯಾವಾಗ್ ಕೇಳಿದ್ರೂ ಪಾಟ್ ಹೋಲ್, ಪಾಟ್ ಹೋಲ್ ಅಂತೀರಾ. ಪಾಟ್ ಹೋಲ್ ಇಲ್ಲದೇ ರಸ್ತೆ ಮಾಡೋಕೆ ಆಗಲ್ಲವಾ?  ರಸ್ತೆ ಮಾಡೋದು ಏನ್  ರಾಕೆಟ್ ಸೈನ್ಸಾ? ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತರಾಟೆ ತೆಗೆದುಕೊಂಡರು.justkannada jk02_new jk02 new

Key words: Minister, Krishna Bhairegowda, ,officer,  ‘Road Construction