Thursday, September 17, 2026

BDA Apartments

ಸಿಪಿಐ ಹಿರಿಯ ನಾಯಕ ಗುರುದಾಸ್ ದಾಸ್ ಗುಪ್ತಾ ನಿಧನ BDA JK_Adv BDA Adv
Home Front Page ಸಿಪಿಐ ಹಿರಿಯ ನಾಯಕ ಗುರುದಾಸ್ ದಾಸ್ ಗುಪ್ತಾ ನಿಧನ

ಸಿಪಿಐ ಹಿರಿಯ ನಾಯಕ ಗುರುದಾಸ್ ದಾಸ್ ಗುಪ್ತಾ ನಿಧನ

ಕೋಲ್ಕತ್ತಾ, ಅಕ್ಟೋಬರ್ 31, 2019 (www.justkannada.in): ಸಿಪಿಐ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಗುರುದಾಸ್ ದಾಸ್ ಗುಪ್ತಾ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.‌ 83 ವರ್ಷದ ಗುರುದಾಸ್ ದಾಸ್ ಗುಪ್ತಾ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.

1985 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಗುರುದಾಸ್ ದಾಸ್ ಗುಪ್ತಾ, 2004 ಹಾಗೂ 2009 ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಗುರುದಾಸ್ ದಾಸ್ ಗುಪ್ತ ಅವರ ನಿಧನಕ್ಕೆ ಹಲವು ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.