ಬೆಂಗಳೂರು,ಜೂನ್,5,2026 (www.justkannada.in): ಬೆಂಗಳೂರು ನಗರಾಭಿವೃದ್ದಿ ಖಾತೆ ನೀಡುವುದಾಗಿ ರಾಮಲಿಂಗರೆಡ್ಡಿ ಅವರಿಗೆ ಮಾತು ಕೊಟ್ಟಿದ್ದು ನಿಜ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಖಾತೆ ಹಂಚಿಕೆ ಹೈಕಮಾಂಢ್ ನಿರ್ಧಾರ. ಏನ್ ಮಾಡುವುದು. ರಾಮಲಿಂಗರೆಡ್ಡಿ ಅವರಿಗೆ ಮುಂದಿನ ದಿಗಳಲ್ಲಿ ಬೆಂಗಳೂರು ಅಭಿವೃದ್ದಿ ಖಾತೆ ನೀಡುವುದಾಗಿ ಹೇಳಿದ್ದು ನಿಜ. ನಾನು ನನ್ನ ತಮ್ಮ ಭೇಟಿಯಾಗಿದ್ದಾಗ ಮಾತು ಕೊಟ್ಟಿದ್ದು ನಿಜ ರಾಮಲಿಂಗರೆಡ್ಡಿ ಬೇರೆ ಕಡೆ ಹೋಗಿದ್ದಾರೆ. ಬೆಂಗಳೂರಿಗೆ ಹಿಂದಿರುಗಿದ ನಂತರ ಖುದ್ದಾಗಿ ಭೇಟಿಯಾಗಿ ಮಾತನಾಡುತ್ತೇವೆ ಎಂದರು.
ಇನ್ನು ಸಚಿವ ಕೆ.ಎಚ್ ಮುನಿಯಪ್ಪ ಜೊತೆ ರಾಹುಲ್ ಗಾಂಧಿ ಮಾತನಾಡಿದರು. ಸಚಿವ ಮುನಿಯಪ್ಪನವರು ಈಗ ಖುಷಿಯಾಗಿ ಹೋಗಿದ್ದಾರೆ. ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದಿದ್ದಾರೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
Key words: true, Ramalinga Reddy, promised, CM DK Shivakumar







