ಮಂಡ್ಯ,ಜೂನ್,4,2026 (www.justkannada.in): ರಾಜ್ಯದಲ್ಲಿ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಹಾಗೂ ಸಚಿವರಾಗಿ 14 ಮಂದಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮಧ್ಯೆ ಉಳಿದ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಪಾಳಯದಲ್ಲಿ ಲಾಬಿ ಜೋರಾಗಿದ್ದು ಹೈಕಮಾಂಡ್ ಮನವೊಲಿಸಲು ಶಾಸಕರು ಮುಂದಾಗಿದ್ದಾರೆ. ಅಂತೆಯೇ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಹ ಸಚಿವರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆ ಕೆಆರ್ ಎಸ್ ನಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಸಚಿವ ಸ್ಥಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ನಮ್ಮದು ರಾಜಕೀಯ ಕುಟುಂಬ. ನಮ್ಮ ಕುಟುಂಬದಿಂದ ನಾವೆಲ್ಲಾ ಸೇರಿ ಒಟ್ಟು 7 ಬಾರಿ ಗೆದ್ದಿದ್ದೇವೆ. ನಮ್ಮ ತಂದೆಗೆ 6 ತಿಂಗಳು ಮಾತ್ರ ಸಚಿವರಾಗುವ ಅವಕಾಶ ಸಿಕ್ಕಿತ್ತು ಎಂದರು.
ನನಗೆ ಸಚಿವ ಸ್ಥಾನ ಸಿಕ್ಕರೆ ಪ್ರಮಾಣಿಕವಾಗಿ ಕೆಲಸ ಮಾಡುವೆ. ಸಚಿವ ಸ್ಥಾನ ಸಿಕ್ಕರೆ ಅಭಿವೃದ್ದಿ ಪಥಕ್ಕೆ ನನ್ನದೇ ಆದ ಕಲ್ಪನೆಗಳಿವೆ ಎಂದು ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
Key words: ministerial position, MLA ,Ramesh Bandisidde Gowda, Mandya






