Sunday, September 6, 2026

BDA Apartments

Home Front Page ಸರ್ಕಾರ ಬಹುಮತ ಸಾಬೀತುಪಡಿಸುವ ಅವಶ್ಯಕತೆ ಇದೆಯೇ? ಸ್ಪಷ್ಟನೆ ಕೊಟ್ಟ ಯು.ಟಿ ಖಾದರ್’

ಸರ್ಕಾರ ಬಹುಮತ ಸಾಬೀತುಪಡಿಸುವ ಅವಶ್ಯಕತೆ ಇದೆಯೇ? ಸ್ಪಷ್ಟನೆ ಕೊಟ್ಟ ಯು.ಟಿ ಖಾದರ್’

ಮಂಗಳೂರು,ಜೂನ್,2,2026 (www.justkannada.in):  ನಾಳೆ ರಾಜ್ಯದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ‍ಪ್ರಮಾಣ ವಚನ ಸ್ವೀಕರಿಸಲಿದ್ದು ಬಹುಮತ ಸಾಬೀತುಪಡಿಸುವ ಅವಶ್ಯಕತೆ ಇದೆಯೇ ಎಂಬ  ವಿಚಾರಕ್ಕೆ ಸ್ಪೀಕರ್ ಯುಟಿ ಖಾದರ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸ್ಪೀಕರ್ ಯುಟಿ ಖಾದರ್,  ಅಗತ್ಯವಿದ್ದರೆ ಮಾತ್ರ ಸರ್ಕಾರ ಬಹುಮತ ಸಾಬೀತುಪಡಿಸಬೇಕು.  ಈಗ ಅದರ  ಅವಶ್ಯಕತೆ ಇಲ್ಲ ಅಂತಾ ಅಂದುಕೊಂಡಿದ್ದೇನೆ.  ಅದರ ಬಗ್ಗೆ ಯಾರಿಂದಲೂ ಯಾವ ತಕರಾರು ಕೂಡ ಬಂದಿಲ್ಲ . ಹಾಗಾಗಿ ಬಹುಮತ ಸಾಬೀತುಪಡಿಸುವ ಯಾವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಕ್ಷೇತ್ರದ ಜನತೆಗೆ ದೊಡ್ಡ ಸ್ಥಾನ ತೆಗೆದುಕೊಳ್ಳಬೇಕೆಂಬ ಆಸೆ ಇದೆ.  ಆದರೆ ನಾನು ಅಧಿಕಾರದ ಹಿಂದೆ ಓಡಿದವನಲ್ಲ ಬೇರೆ ಅವಕಾಶ ಸಿಕ್ಕರೆ ಡೆಪ್ಯೂಟಿ ಸ್ಪೀಕರ್ ಗೆ ರಾಜೀನಾಮೆಕೊಡಬೇಕು ಇಂದು ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದರು.

ಉಡುಪಿ ಉಸ್ತುವಾರಿ ಸ್ಥಾನಕ್ಕೆ  ಬೇಡಿಕೆ ವಿಚಾರ,  ನಾನು ಯಾವ ಬೇಡಿಕೆ ಇಟ್ಟಿಲ್ಲ  ಚಾಮರಾಜನಗರ ಕೋಲಾರ  ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ.  ಎಲ್ಲಾ ಕಡೆ ಉತ್ತಮ ಕೆಲಸ ಮಾಡಿದ್ದೇನೆ ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.

Key words:  government, prove, majority, U.T. Khader