Sunday, August 30, 2026

BDA Apartments

Home Front Page ಡಿಕೆಶಿ ಜೊತೆ  14 ಮಂದಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ: ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ..?

ಡಿಕೆಶಿ ಜೊತೆ  14 ಮಂದಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ: ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ..?

ಬೆಂಗಳೂರು, ಮೇ,30,2026 (www.justkannada.in): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಜೂನ್ 3 ರಂದು ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಮಾಹಿತಿ ನೀಡಿದ್ದು ಇದೀಗ ಡಿಕೆ ಶಿವಕುಮಾರ್ ಜೊತೆ 14 ಮಂದಿ ಸಚಿವರಾಗಿ ಪದಗ್ರಹಣ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಜೂನ್ 3ರಂದು ಸರಳ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಪದಗ್ರಹಣ ಮಾಡಲಿದ್ದು  ಈ ವೇಳೆ 14 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

 ಸಚಿವರಾಗುವ ಸಂಭಾವ್ಯ  ಸಚಿವರ ಪಟ್ಟಿ ಹೀಗಿದೆ ನೋಡಿ

ಯು. ಟಿ ಖಾದರ್,  ಕೃಷ್ಣೇಭೈರೇಗೌಡ, ,  ಪ್ರಿಯಾಂಕ್ ಖರ್ಗೆ  ಕೆಜೆ ಜಾರ್ಜ್, ಪರಮೇಶ್ವರ್ ,ಎಂಬಿ ಪಾಟೀಲ್, ಭೈರತಿ ಸುರೇಶ್,  ಸತೀಶ್ ಜಾರಕಿಹೊಳಿ,  ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್,  ರೂಪಾ ಶಶಿಧರ್,  ಯತೀಂದ್ರ ಸಿದ್ದರಾಮಯ್ಯ,  ಚಲುವರಾಯಸ್ವಾಮಿ , ಹ್ಯಾರಿಸ್ ಸಾಂಭವ್ಯ ಸಚಿವರಾಗುವವರು ಎಂದು ಹೇಳಲಾಗುತ್ತಿದೆ.

Key words: 14 people,  oath,  with , DK Shivakumar, CM