Friday, October 9, 2026

BDA Apartments

Home Front Page ರಾಜಕಾರಣ ಬರುತ್ತೆ ಹೋಗುತ್ತೆ ಮಾತಿನ ಮೇಲೆ ನಿಗಾ ಇರಲಿ- ಶಾಸಕ ಇಕ್ಬಾಲ್ ಹುಸೇನ್ ಆಕ್ರೋಶ

ರಾಜಕಾರಣ ಬರುತ್ತೆ ಹೋಗುತ್ತೆ ಮಾತಿನ ಮೇಲೆ ನಿಗಾ ಇರಲಿ- ಶಾಸಕ ಇಕ್ಬಾಲ್ ಹುಸೇನ್ ಆಕ್ರೋಶ

ರಾಮನಗರ,ಮೇ,23,2026 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಟೀಕಿಸಿದ್ದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ತಮ್ಮ ವಯಸ್ಸಿಗೆ ತಕ್ಕಂತೆ ನಿಖಿಲ್ ಮಾತನಾಡಬೇಕು ಅನುಭವಕ್ಕೆ ತಕ್ಕಂತೆ ಮಾತನಾಡಿದರೆ ಒಳ್ಳೆಯದು ಆಗುತ್ತದೆ. ನಿಖಿಲ್ ಕುಮಾರಸ್ವಾಮಿಗೆ ಅನುಭವ ಕಡಿಮೆ ಇದೆ. ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ಒಂದೇ ವಯಸ್ಸಿನವರು ರಾಜಕಾರಣ ಬರುತ್ತೆ ಹೋಗುತ್ತೆ ಮಾತನಿಮೇಲೆ ನಿಗಾ ಇರಲಿ ಎಂದು ಕಿಡಿಕಾರಿದರು.

ನಿಖಿಲ್ ಯಾವ ನೈತಕತೆ ಇಟ್ಟುಕೊಂಡು ಮಾತನಾಡಿದ್ದಾರೋ ಗೊತ್ತಿಲ್ಲ. ರಾಜಕಾರಣ ಬರುತ್ತೆ ಹೋಗುತ್ತೆ ಮಾತಿನ ಮೇಲೆ ನಿಗಾ ಇರಲಿ ಎಂದು ಶಾಸಕ ಇಕ್ಬಾಲ್ ಹುಸೇನ್ ಎಚ್ಚರಿಸಿದರು.ರಾಜಕಾರಣ ಬರುತ್ತೆ ಹೋಗುತ್ತೆ ಮಾತಿನ ಮೇಲೆ ನಿಗಾ ಇರಲಿ jk02_new jk02 new

Key words: Politics, Nikhil Kumaraswamy, MLA, Iqbal Hussain