ಎಬೋಲಾ ವೈರಸ್ ಭೀತಿ ಹಿನ್ನೆಲೆ:  ರಾಜ್ಯದಲ್ಲೂ ಅಲರ್ಟ್- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮೇ,21,2026 (www.justkannada.in): ಎಬೋಲಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಅಲರ್ಟ್ ಆಗಿದ್ದು,  ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಾವು ರೆಡಿ ಇದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಎಬೋಲಾ  ಆಫ್ರಿಕಾದ ಕಾಂಗೋ ಉಗಾಂಡದಲ್ಲಿ ಕಾಣಿಸಿಕೊಂಡಿದೆ. ನಮ್ಮ ದೇಶದಲ್ಲಿ ಎಲ್ಲೂ ಈ ವೈರಸ್ ಕಂಡು ಬಂದಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ  ಫಾಲೋ ಮಾಡುತ್ತೇವೆ ಎಂದರು.

ಸದ್ಯ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಆಫ್ರಿಕಾ ದೇಶದಿಂದ ಬರುವ ಪ್ರವಾಸಿಗರ ಮೇಲೆ ನಿಗಾ ಇಡಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Key words: Ebola virus, Alert, state, Minister, Dinesh Gundu Rao