Sunday, August 23, 2026

BDA Apartments

Home Front Page ಕೇರಳ ನೂತನ ಸಿಎಂ ಆಗಿ ವಿ.ಡಿ ಸತೀಶನ್ ಪ್ರಮಾಣ ವಚನ ಸ್ವೀಕಾರ

ಕೇರಳ ನೂತನ ಸಿಎಂ ಆಗಿ ವಿ.ಡಿ ಸತೀಶನ್ ಪ್ರಮಾಣ ವಚನ ಸ್ವೀಕಾರ

ತಿರುವನಂತಪುರಂ,ಮೇ,18,2026 (www.justkannada.in):   ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಪ್ರಮಾಣ ವಚನ ಸ್ವೀಕಾರ ಮಾಡಿದರು.

ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಕೇರಳದ ನೂತನ ಸಿಎಂ ಆಗಿ ವಿ.ಡಿ ಸತೀಶನ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥನ್ ಪ್ರಮಾನ ವಚನ ಬೋಧಿಸಿದರು.

ಪ್ರಮಾಣವಚನ ಸ್ವೀಕಾರ ಸಮಾರಂಭ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಎಲ್ಲಾ ಸಿಎಂಗಳು ಭಾಗಿಯಾಗಿದ್ದರು.

Key words: V.D. Satheesan, sworn, new CM, Kerala