Wednesday, July 29, 2026

BDA Apartments

Home Front Page ಬಳ್ಳಾರಿ ಬಿಜೆಪಿಯಲ್ಲಿ ಅಸಮಾಧಾನ: 48  ಬಿಜೆಪಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ….

ಬಳ್ಳಾರಿ ಬಿಜೆಪಿಯಲ್ಲಿ ಅಸಮಾಧಾನ: 48  ಬಿಜೆಪಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ….

ಬಳ್ಳಾರಿ,ಅ,29,2019(www.justkannada.in):  ಬಳ್ಳಾರಿ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು  ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮೂರು ಶೇಖರ್ ನೇಮಕ ಮಾಡಿದ್ದನ್ನ ವಿರೋಧಿಸಿ 48 ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.

ದಮ್ಮೂರು ಶೇಖರ್ ಅವರನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಜಿಲ್ಲಾ ಬಿಜೆಪಿ ಘಟಕದಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ದಮ್ಮೂರು ಶೇಖರ್ ನೇಮಕ  ಮಾಡಿದ್ದಕ್ಕೆ 48 ಬಿಜೆಪಿ ಪದಾಧಿಕಾರಿಗಳು ಬಳ್ಳಾರಿ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್  ಅವರಿಗೆ ಸಾಮೂಹಿಕವಾಗಿ ರಾಜಿನಾಮೆ ಸಲ್ಲಿಸಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕಾತಿ  ಹಿಂದೆ ಶಾಸಕ ಸೋಮಶೇಖರ್ ರೆಡ್ಡಿ  ಕೈವಾಡವಿದೆ ಎನ್ನಲಾಗಿದ್ದು ದೇ ಕಾರಣಕ್ಕಾಗಿ ಇದೀಗ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ ಎನ್ನಲಾಗಿದೆ.  ಇನ್ನು ಭಿನ್ನಮತ ಸ್ಪೋಟ  ಬೆನ್ನಲ್ಲೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ನೇಮಕಕ್ಕೆ ತಡೆ ಹಿಡಿಯಲಾಗಿದೆ.

Key words: Bellary –-48 BJP -leaders–mass- resignation.