Tuesday, August 4, 2026

BDA Apartments

Home Front Page ಗೆಲ್ಲುವ ಕಡೆ ಜಮೀರ್, ಸೋಲುವ ಕಡೆ ಡಿಕೆಶಿ ಕಳಿಸ್ತಾರೆ- ಆರ್.ಅಶೋಕ್ ಲೇವಡಿ

ಗೆಲ್ಲುವ ಕಡೆ ಜಮೀರ್, ಸೋಲುವ ಕಡೆ ಡಿಕೆಶಿ ಕಳಿಸ್ತಾರೆ- ಆರ್.ಅಶೋಕ್ ಲೇವಡಿ

ಬೆಂಗಳೂರು,ಮೇ,4,2026 (www.justkannada.in):  ಗೆಲ್ಲುವ ಕಡೆ ಜಮೀರ್ ರನ್ನು ಸೋಲುವ ಕಡೆ ಡಿಕೆ ಶಿವಕುಮಾರ್ ರನ್ನು ಕಳಿಸುತ್ತಾರೆ. ಡಿಕೆ ಶಿವಕುಮಾರ್ ತುಳಿಯಲು ಏನು ಬೇಕೋ ಅದನ್ನ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದರು.

ಇಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಈ ಸಂಬಂಧ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ.  ಗೆಲ್ಲುವ ಕಡೆ ಜಮೀರ್,  ಸೋಲುವ ಕಡೆ ಡಿಕೆ ಶಿವಕುಮಾರ್ ರನ್ನು ಕಳುಹಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ತುಳಿಯಲು ಏನು ಬೇಕೋ ಅದನ್ನ ಮಾಡಿದ್ದಾರೆ. ಡಿಕೆ ಶಿವಕುಮಾರ್ ಗೋವಾಗೆ ಹೋದಾಗ ಎಡವಿ ಬಿದ್ದಿದ್ದಾರೆ.  ಅಸ್ಸಾಂ ಬದಲು ಇಲ್ಲಿಯೇ ರೆಸಾರ್ಟ್ ಮಾಡಿಕೊಡಿ. ಮಲ್ಲಿಕಾರ್ಜುನ ಖರ್ಗೆ ದೆಹಲಿ ಬಿಟ್ಟು ಕರ್ನಾಟಕದ ಕಡೆ ಮುಖ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ತಮಿಳುನಾಡು ವಿಚಿತ್ರ ಸಮೀಕ್ಷೆ ಇತ್ತು. ಉಳಿದಂತೆ ಸಮೀಕ್ಷೆಯಂತೆ ಫಲಿತಾಂಶ ಬಂದಿದೆ. ಕಾಂಗ್ರೆಸ್ ನ ಹಣದ ಹೊಳೆ ರೌಡಿಸಂನಿಂದ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.

Key words: Jameer, winning side, DK Shivakumar, losing side, R.Ashok