Saturday, August 1, 2026

BDA Apartments

Home Front Page ಸಚಿವ ಸ್ಥಾನ ಬಿಡಲು ಹೈಕಮಾಂಡ್ ಸೂಚಿಸಿದ್ರೆ ಆ ಕ್ಷಣವೇ ರಾಜೀನಾಮೆಗೆ ಸಿದ್ದ- ಶಿವಾನಂದ ಪಾಟೀಲ್

ಸಚಿವ ಸ್ಥಾನ ಬಿಡಲು ಹೈಕಮಾಂಡ್ ಸೂಚಿಸಿದ್ರೆ ಆ ಕ್ಷಣವೇ ರಾಜೀನಾಮೆಗೆ ಸಿದ್ದ- ಶಿವಾನಂದ ಪಾಟೀಲ್

ಬೆಂಗಳೂರು,ಮೇ,2,2026 (www.justkannada.in):  ಸಚಿವ ಸ್ಥಾನ ಬಿಡಲು ಹೈಕಮಾಂಡ್ ಸೂಚನೆ ನೀಡಿದರೆ ಆ ಕ್ಷಣವೇ ನಾಣು ರಾಜೀನಾಮೆ ನೀಡಲು ಸಿದ್ದ ಎಂದು ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಸಚಿವ ಸಂಪುಟ ಪುನಾರಚನೆ ಆಗಬೇಕು ಎನ್ನುವುದು ಕೆಲವು ಶಾಸಕರ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ, ನಾನು ಸಚಿವ ಸ್ಥಾನಕ್ಕಾಗಿ ಎಂದಿಗೂ ಯಾರ ಮುಂದೆಯೂ ಬೇಡಿಕೆ ಇಟ್ಟಿಲ್ಲ. ಪಕ್ಷ ನನಗೆ ಜವಾಬ್ದಾರಿ ನೀಡಿದೆ, ಅದನ್ನು ನಿರ್ವಹಿಸುತ್ತಿದ್ದೇನೆ. ಒಂದು ವೇಳೆ ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದ ಸಚಿವ ಸ್ಥಾನ ಬಿಟ್ಟುಕೊಡು ಎಂದು ಹೈಕಮಾಂಡ್  ಹೇಳಿದರೇ ನಾನು ಈ ಕ್ಷಣವೇ ರಾಜೀನಾಮೆ ನೀಡಲು ಸಿದ್ಧ ಎಂದರು.

ಈ ಹಿಂದೆ ನಾನು ಸತತ 20 ವರ್ಷಗಳ ಕಾಲ ಸಚಿವ ಸ್ಥಾನವಿಲ್ಲದೆಯೇ ಶಾಸಕನಾಗಿ ಕೆಲಸ ಮಾಡಿದ್ದೇನೆ. ನಾನು ಅಧಿಕಾರಕ್ಕಾಗಿ ಹಪಹಪಿಸುವ ವ್ಯಕ್ತಿಯಲ್ಲ. ಅಧಿಕಾರವಿಲ್ಲದಿದ್ದರೂ ಜನರ ಸೇವೆ ಮಾಡುವುದು ನನಗೆ ಗೊತ್ತು. ಹಾಗಾಗಿ ಈಗ ಸಚಿವ ಸ್ಥಾನ ಹೋದರೆ ನನಗೆ ಯಾವುದೇ ಸಂಕಟವಿಲ್ಲ ಎಂದರು.

Key words: Sivananda Patil, high command, leave, minister, Position