ಮೈಸೂರು, ಏಪ್ರಿಲ್,29,2026 (www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿರುವ ಕುಮಾರಿ ಮಾಧುರಿ ಅವರ ಮನೆಗೆ ಮಂಗಳವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಅವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಮಾಧುರಿ ಅವರ ತಾಯಿ ಸರಿತಾ ಅವರು ಗೃಹಲಕ್ಷ್ಮಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದು, ಮಗಳ ವಿದ್ಯಾಭ್ಯಾಸಕ್ಕೆ ಬೇಕಿರುವ ಪೂರಕ ಸಾಮಗ್ರಿಗಳನ್ನು ಖರೀದಿಸಲು ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಡಾ.ಪುಷ್ಪಾ ಅಮರನಾಥ್, ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬದಲಾವಣೆಯ ಬೆಳಕಾಗಿದೆ. ಇದಕ್ಕೆ ಅನೇಕ ಫಲಶೃತಿಗಳು ನಮ್ಮ ಕಣ್ಮುಂದೆ ಇವೆ. ಇದಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಗೃಹಲಕ್ಷ್ಮಿ ಯೋಜನೆಯ ಹಣದ ಸಹಾಯದಿಂದ ಮಾಧುರಿ ಎಂಬ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ 2ನೇ ಸ್ಥಾನ ಪಡೆದಿರುವುದು ಎಂದರು
ಈಕೆಯಂತೆ ಅನೇಕ ಮಕ್ಕಳ ಬದುಕಿನಲ್ಲಿ ಗ್ಯಾರಂಟಿ ಯೋಜನೆಗಳು ಬೆಳಕಾಗಿದೆ. ಕೆಲವು ಮಾತ್ರ ಎಲ್ಲರ ಕಣ್ಣಿಗೆ ಕಂಡರೆ, ಅನೇಕ ಫಲಾನುಭವಿಗಳ ಕಥೆ ಎಲೆಮರೆಯಾಗಿಯೇ ಉಳಿಯುತ್ತವೆ. ಇಂತಹ ಫಲಶೃತಿಗಳು ಕಣ್ಣಮುಂದೆ ಬಂದಾಗೆಲ್ಲ, ಸರ್ಕಾರಕ್ಕೆ ಸಾರ್ಥಕತೆಯ ಭಾವ ಮೂಡುತ್ತದೆ ಎಂದರು.
ಇಂತಹ ಯೋಜನೆ ರೂಪಿಸುವಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಶ್ರಮ ಅಪಾರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅರುಣ್ ಕುಮಾರ್, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Key words: Dr. Pushpa Amarnath, congratulates, SSLC 2nd Rank, student, Mysore







