Thursday, July 30, 2026

BDA Apartments

Home Front Page ಸಿಎಂ ಬದಲಾವಣೆ ವಿಚಾರ: ಆದಷ್ಟು ಬೇಗ ಹೈಕಮಾಂಡ್ ಉತ್ತರ ಕೊಡುತ್ತೆ- ಗೃಹ ಸಚಿವ ಪರಮೇಶ್ವರ್

ಸಿಎಂ ಬದಲಾವಣೆ ವಿಚಾರ: ಆದಷ್ಟು ಬೇಗ ಹೈಕಮಾಂಡ್ ಉತ್ತರ ಕೊಡುತ್ತೆ- ಗೃಹ ಸಚಿವ ಪರಮೇಶ್ವರ್

ಕಲಬುರಗಿ,ಏಪ್ರಿಲ್,28,2026 (www.justkannada.in):  ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಆದಷ್ಟು ಬೇಗ ಇದಕ್ಕೆ ಉತ್ತರ ಕೊಡುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಎಲ್ಲದಕ್ಕೂ ಅದಷ್ಟು ಬೇಗ ಉತ್ತರ ಸಿಗುತ್ತದೆ. ಪಕ್ಷದಲ್ಲಿ  ಯಾವುದೇ ಗೊಂದಲ ಇಲ್ಲ. ಕೊಟ್ಟ ಮಾತಿನಂತೆ ಜನಸೇವೆ ಮಾಡುತ್ತಿದ್ದೇವೆ. ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ದ  ಪಕ್ಷದಲ್ಲಿ ಅಧಿಕಾರ ಬದಲಾವಣೆ ಗೊಂದಲ ಇಲ್ಲ ಎಂದರು.

ದಲಿತ ಸಿಎಂ ಕೂಗು ವಿಚಾರ, ಅದು ಜನರ ಅಭಿಪ್ರಾಯ. ಜನರು ಪ್ರೀತಿವಿಶ್ವಾಸದಿಂದ ಮಾತನಾಡುತ್ತಾರೆ. ಹೈಕಮಾಂಡ್ ಗಮನಿಸಿ ಸೂಕ್ತ ತೀರ್ಮಾನ  ತೆಗೆದುಕೊಳ್ಳುತ್ತಾರೆ. ಎಲ್ಲದಕ್ಕೂ ಆದಷ್ಟು ಬೇಗ ಹೈಕಮಾಂಡ್  ಉತ್ತರ ಕೊಡುತ್ತಾರೆ ಎಂದರು.

Key words: CM change, issue,  High command, Home Minister, Parameshwar