Thursday, September 17, 2026

BDA Apartments

ಸಂಪುಟ ಪುನಾರಚನೆ: ಮೇ 2ನೇ ಅಥವಾ 3ನೇ ವಾರದಲ್ಲಿ ‘ಕೈ’ ಶಾಸಕರಿಗೆ ಸಿಹಿಸುದ್ದಿ? BDA ...
Home Front Page ಸಂಪುಟ ಪುನಾರಚನೆ: ಮೇ 2ನೇ ಅಥವಾ 3ನೇ ವಾರದಲ್ಲಿ ‘ಕೈ’ ಶಾಸಕರಿಗೆ ಸಿಹಿಸುದ್ದಿ?

ಸಂಪುಟ ಪುನಾರಚನೆ: ಮೇ 2ನೇ ಅಥವಾ 3ನೇ ವಾರದಲ್ಲಿ ‘ಕೈ’ ಶಾಸಕರಿಗೆ ಸಿಹಿಸುದ್ದಿ?

ಬೆಂಗಳೂರು,ಏಪ್ರಿಲ್,27,2026 (www.justkannada.in): ರಾಜ್ಯದಲ್ಲಿ ಉಪಚುನಾವಣೆ ಮುಗಿದ ನಂತರ ಸಚಿವ ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬಂದಿದ್ದು ಹೈಕಮಾಂಡ್ ಗೆ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್, ಮೇ 2ನೇ ಅಥವಾ 3ನೇ ವಾರದಲ್ಲಿ ಸಿಹಿಸುದ್ದಿ ಕೊಡುತ್ತೇವೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಅಶೋಕ್ ಪಟ್ಟಣ್, ದೆಹಲಿಗೆ ಹೋಗಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿದ್ದೇವೆ  ಮೇ 2ನೇ ವಾರ ಅಥವಾ 3ನೇ ವಾರದಲ್ಲಿ ಸಿಹಿಸುದ್ದಿ ಕೊಡುತ್ತೇವೆ ಎಂದಿದ್ದಾರೆ.  ಎಐಸಿಸಿ ಅದ್ಯಕ್ಷ ಮಲ್ಲಿಕಾರಜುನ ಖರ್ಗೆ ನಮ್ಮ ಜೊತೆ ಮಾತನಾಡಿದ್ದಾರೆ. ಎಂದರು.

ಮತ್ತೊಮ್ಮೆ ಸಭೆ ಸೇರಲು ಶಾಸಕರು ಒತ್ತಾಯಿಸುತ್ತಿದ್ದಾರೆ. 40 ಜನ ಶಾಸಕರು ಮತ್ತೆ ಹೈಕಮಾಂಡ್ ನಾಯಕರ ಭೇಟಿಗೆ ಹೋಗುತ್ತೇವೆ.  ಉಪಚುನಾವಣೆ ರಿಸಲ್ಟ್ ಬಂದ ತಕ್ಷಣ ದೆಹಲಿಗೆ ಹೋಗುತ್ತೇವೆ. ಫಲಿತಾಂಶ ಬಳಿಕ 40 ಶಾಸಕರು ದೆಹಲಿಗೆ ಹೋಗುತ್ತೇವೆ ಎಂದರು.

Key words: Cabinet reshuffle,  Good news, MLA Ashok Pattan