SSLC ಫಲಿತಾಂಶದಲ್ಲಿ ಯಡವಟ್ಟು: ಯಾವ ವಿದ್ಯಾರ್ಥಿಗೂ ಅನ್ಯಾಯವಾಗಲು ಬಿಡಲ್ಲ- ಸಚಿವ ಮಧು ಬಂಗಾರಪ್ಪ

ಬೆಂಗಳೂರು,ಏಪ್ರಿಲ್,27,2026 (www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶೃಂಗೇರಿ ವಿದ್ಯಾರ್ಥಿಯೊಬ್ಬರಿಗೆ ಹೆಚ್ಚು ಅಂಕ ಬಂದಿದ್ದರೂ ಕಡಿಮೆ ಅಂಕ ನಮೂದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರ‍ಪ್ಪ, ಯಾವ ವಿದ್ಯಾರ್ಥಿಗೂ ಅನ್ಯಾಯವಾಗಲು ಬಿಡಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, ದೊಡ್ಡ ಇಲಾಖೆಯಲ್ಲಿಈ ರೀತಿ ತಪ್ಪು ಆಗಬಾರದು. ಆದರೂ ಆಗಿರುವ ತಪ್ಪನ್ನ ಸರಿಪಡಿಸಿ ಅಂಕ ನೀಡಲಾಗುವುದು ಯಾವ ವಿದ್ಯಾರ್ಥಿಗೂ ಸಹ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ಶಿರಸಿ ವಿದ್ಯಾರ್ಥಿಗೂ ಪರೀಕ್ಷೆಗೆ ಅಬ್ಸೆಂಟ್ ಎಂದು ಬಂದಿತ್ತು ಇದು ಗೊತ್ತಾಗಿ 2 ಗಂಟೆಯಲ್ಲಿ ಸರಿಪಡಿಸಲಾಗಿದೆ. ಯಾವುದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Key words:  SSLC result, student, injustice, Minister, Madhu Bangarappa