ಬೆಂಗಳೂರು, ಏಪ್ರಿಲ್,26,2026 (www.justkannada.in): ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ 10 ಆರೋಪಿಗಳನ್ನು ಬೆಂಗಳೂರಿನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪ್ರದೀಪ್, ಸಾಗರ್, ಕಿರಣ್, ಜೀವನ್, ಭರತೇಶ್, ಶಶಿಕುಮಾರ್, ಸೋನು, ಕುಮಾರ್, ಶ್ರೀಕಾಂತ್ ಹಾಗೂ ಕಿರಣ್ ಬಂಧಿತ ಆರೋಪಿಗಳು. ಶುಕ್ರವಾರ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಆರ್ ಸಿಬಿ, ಜಿಟಿ ಪಂದ್ಯದ ಒಂದೇ ಮ್ಯಾಚ್ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ 7 ಎಫ್ ಐ ಆರ್ ದಾಖಲಾಗಿತ್ತು. ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡಿದ್ದ 10 ಆರೋಪಿಗಳನ್ನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ 19 ಐಪಿಎಲ್ ಟಿಕೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಕೆ ಎಸ್ ಸಿ ಎ ಸದಸ್ಯರಿಗೆ ನೀಡಿದ್ದ ಕಾಂಪ್ಲಿಮೆಂಟರಿ ಟಿಕೆಟ್ ಗಳೇ ಮಾರಾಟವಾಗಿದ್ದವು. ಕಾಂಪ್ಲಿಮೆಂಟರಿ ಟಿಕೆಟ್ ಮೇಲೆ ಹಣ ನಮೂದು ಅಥವಾ ಸೊನ್ನೆ ಎಂದು ಬರೆದಿರುತ್ತದೆ. ತಮ್ಮಲ್ಲಿರುವ ಟಿಕೆಟ್ ಮೌಲ್ಯದ ಅರಿವಿಲ್ಲದೇ ಆರೋಪಿಗಳು ಈ ಟೆಕೆಟ್ ಗಳನ್ನು ಮಾರಾಟ ಮಾಡಿದ್ದರು.
ಮಫ್ತಿಯಲ್ಲಿ ಟಿಕೆಟ್ ಖರೀದಿಸುವವರ ಸೋಗಿನಲ್ಲಿ ಬಂದ ಪೊಲೀಸರು ಕಾರ್ಯಾಚರಣೆ ನಡೆಸಿ 10 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಟಿಕೆಟ್ ನೀಡಿದವರ ಬಗ್ಗೆ ಪೊಲೀಸರಿಂದ ತನಿಖೆ ಮುಂದುವರೆದಿದೆ.
Key words: IPL ticket, sale, block, 10 accused, arrested







