ಮೈಸೂರು,ಏಪ್ರಿಲ್,14,2026 (www.justkannada.in): ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ಹಿರಿಯ ಶಾಸಕರು ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಿರುವ ಸಂಬಂಧ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಶಾಸಕ ತನ್ವೀರ್ ಸೇಠ್, ನನ್ನನ್ನು ದೆಹಲಿಗೆ ಕರೆದಿದ್ದರು. ನಾನು ದೆಹಲಿಗೆ ಹೋಗಲ್ಲ. ನನ್ನದೇ ಆದ ತೂಕವಿದೆ. ಸಚಿವ ಸಂಪುಟ ಸರ್ಜರಿ ಖಚಿತ. ಈಗ 3 ವರ್ಷಕ್ಕೆ ಬಂದಿದ್ದೇವೆ. ಗಾಳಿ ಸುಂಟರಗಾಳಿ ಬರುತ್ತೆ. ಯರ್ಯಾರು ಏನೇನು ಆಗುತ್ತಾರೋ ಗೊತ್ತಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದರು.
ಸಿಎಂ ಆಪ್ತರ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಯಾರನ್ನು ಟಾರ್ಗೆಟ್ ಮಾಡಿಲ್ಲ ಮಾಡುವುದೂ ಇಲ್ಲ. ಯಾರಿಗೆ ಜವಾಬ್ದಾರಿ ನೀಡಲಾಗಿತ್ತು ಅವರ ಮೇಲೆ ಕ್ರಮ ಆಗಿದೆ. ಕ್ರಮ ಸರಿಯಿದೆಯೆಂದು ಈ ಬಗ್ಗೆ ಕ್ರಮ ಕೈಗೊಂಡವರು ಹೇಳಲಿ ಎಂದು ಹೇಳಿದರು.
Key words: I will ,not go , Delhi, MLA, Tanveer Sait







