Sunday, August 30, 2026

BDA Apartments

Home Front Page ಸಿದ್ದರಾಮಯ್ಯ ಸಂಪುಟದಲ್ಲಿ ಕೆಲ ಸಚಿವರನ್ನ ಕೈಬಿಡಬೇಕು-ಕಾಂಗ್ರೆಸ್ ಶಾಸಕ

ಸಿದ್ದರಾಮಯ್ಯ ಸಂಪುಟದಲ್ಲಿ ಕೆಲ ಸಚಿವರನ್ನ ಕೈಬಿಡಬೇಕು-ಕಾಂಗ್ರೆಸ್ ಶಾಸಕ

ನವದೆಹಲಿ,ಏಪ್ರಿಲ್,13,2026 (www.justkannada.in):  ಉಪಚುನಾವಣೆ ಮುಗಿದ ಬೆನ್ನಲ್ಲೆ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ನಡುವೆ ಹಿರಿಯ ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದಾರೆ.

ಈ ಕುರಿತು ಮಾತನಾಡಿರುವ  ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ , 18 ಶಾಸಕರು ದೆಹಲಿಗೆ ಬಂದಿದ್ದೇವೆ  ಸಭೆ ಮಾಡಿದ್ದೇವೆ.  25ಕ್ಕೂ ಹೆಚ್ಚು ಶಾಸಕರು ಹೈಕಮಾಂಡ್ ಭೇಟಿ ಮಾಡುತ್ತೇವೆ ರಾಜ್ಯ ಸಚಿವ ಸಂಪುಟ ಪುನಾರಚನೆ ಆಗಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಸಂಪುಟದಲ್ಲಿ ಕೆಲ ಸಚಿವರನ್ನ ಕೈಬಿಡಬೇಕು. ಉತ್ತಮ ಆಡಳಿತಕ್ಕೆ ಅವಕಾಶ ಕೊಡಬೇಕು ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ತಿಳಿಸಿದ್ದಾರೆ.

Key words: CM Siddaramaiah, Cabinet reshuffle, Congress, MLA