Wednesday, October 7, 2026

BDA Apartments

immense respect BDA JK_Adv BDA Adv
Home Front Page ಸ್ವಾಮೀಜಿಗಳು ಚಾರಿತ್ರ್ಯವಂತರಾಗಿದ್ರೆ ಯಾಕೆ ಸ್ಟೇ ತರುತ್ತಿದ್ರು? ಶಾಸಕ ವಿಜಯಾನಂದ ಕಾಶಪ್ಪನವರ್ ಕಿಡಿ

ಸ್ವಾಮೀಜಿಗಳು ಚಾರಿತ್ರ್ಯವಂತರಾಗಿದ್ರೆ ಯಾಕೆ ಸ್ಟೇ ತರುತ್ತಿದ್ರು? ಶಾಸಕ ವಿಜಯಾನಂದ ಕಾಶಪ್ಪನವರ್ ಕಿಡಿ

ಬಾಗಲಕೋಟೆ,ಏಪ್ರಿಲ್,7,2026 (www.justkannada.in): ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆ ಮೇಲೆ ಲೈಂಗಿಕ ಕಿರುಕುಳವೆಸಗಿದ ಆರೋಪ ಕೇಳಿ ಬಂದಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಬೆಂಕಿಯಿಲ್ಲದೇ ಹೊಗೆಯಾಡುವುದಿಲ್ಲ. ಸ್ವಾಮೀಜಿಗಳು ಚಾರಿತ್ರ್ಯವಂತರಾಗಿದ್ದರೇ ಯಾಕೆ ಸ್ಟೇ ತರುತ್ತಿದ್ದರು ಎಂದಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್,  ಬಸವ ಜಯಮೃತ್ಯುಂಜಯ ಶ್ರೀ ಸ್ವಾಮೀಜಿಗಳಾಗಿ ಉಳಿದಿಲ್ಲ. ನಡೆ-ನುಡಿಗಳಲ್ಲಿ ಅವರು ಸ್ವಾಮೀಜಿಗಳಾಗಿಲ್ಲ ಇಂಥಹ ಕಾರಣಕ್ಕೆ ಅವರನ್ನು ಪೀಠದಿಂದ ಉಚ್ಛಾಟನೆ ಮಾಡಲಾಗಿತ್ತು ಎಂದರು.

ಬದಲಾಗಲಿ ಎಂದು ಸ್ವಾಮೀಜಿಗಳಿಗೆ ನೋಟಿಸ್ ಕೂಡ ನೀಡಿದ್ದೆವು.  ಆದರೆ ನೋಟಿಸ್ ನೀಡಿದರೂ ಬದಲಾಗದ ಹಿನ್ನೆಲೆಯಲ್ಲಿ ಅವರನ್ನು ಉಚ್ಛಾಟನೆ ಮಾಡಲಾಯಿತು. ಕಾಲ ಎಲ್ಲದಕ್ಕೂ ಉತ್ತರ ನೀಡುತ್ತಿದೆ ಎಂದು  ಕಾಶಪ್ಪನವರ್ ತಿಳಿಸಿದರು.

Key words: Basava Jaya Mrityunjaya Swamiji, character, MLA, Vijayananda Kashappanavar